ಲಾರಿ ಢಿಕ್ಕಿ ಹೊಡೆದು ಗಾಯಗೊಂಡ ಸೈಕಲ್ ಸವಾರ ಮೃತ್ಯು

ಕಾಸರಗೋಡು: ನೀಲೇಶ್ವರ ಕರುವಾಚ್ಚೇರಿ ತೋಟದ ಬಳಿ ಮೀನು ಲಾರಿ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಸೈಕಲ್ ಸವಾರ ಕರುವಾಚ್ಚೇರಿಯ ಪಾಚ್ಚಂಗೈಯ ಕಣ್ಣನ್ ಎಂಬವರ ಪುತ್ರ ಸಿ.ಮನೋಹರನ್ (೬೭) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ ಗುರುವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ಮೃತರು ಪತ್ನಿ ರತ್ನ, ಮಕ್ಕಳಾದ ರೇಷ್ಮಾ, ಭಕ್ತ, ಸಹೋದರ-ಸಹೋದರಿಯರಾದ ಕೃಷ್ಣನ್, ನಳಿನಿ, ಶ್ರೀಮತಿ, ರಮ, ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page