ಲಿಟ್ಲ್ ಕೈಟ್ಸ್: ಚಟ್ಟಂಚಾಲ್ ಶಾಲೆಗೆ ಪ್ರಥಮ, ಮಂಜೇಶ್ವರಕ್ಕೆ ತೃತೀಯ ಪ್ರಶಸ್ತಿ

ಕಾಸರಗೋಡು: ರಾಜ್ಯದ ಅತ್ಯಂತ ಉತ್ತಮ ಲಿಟ್ಲ್ ಕೈಟ್ಸ್ ಘಟಕಗಳಿಗಿರುವ 2023-24ನೇ ಪುರಸ್ಕಾರ ಘೋಷಿಸಿದಾಗ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಚಟ್ಟಂಚಾಲ್ ಸಿಎಚ್ಎಸ್ಎಸ್ಗೆ ಲಭಿಸಿದೆ. ದ್ವಿತೀಯ ಸ್ಥಾನ ತಚ್ಚಂಗಾಡ್ ಜಿಎಚ್ಎಸ್, ತೃತೀಯ ಮಂಜೇಶ್ವರ ಎಸ್ಎಟಿಎಚ್ಎಸ್ ಗಳಿಸಿದೆ. ಈ ಶಾಲೆಗಳಿಗೆ ಯಥಾಕ್ರಮ 30,25,15 ಸಾವಿರ ರೂ. ಬಹುಮಾನ ಲಭಿಸಲಿದೆ. ಜುಲೈ 6ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿ ವಿತರಿಸುವರು. ಜಿಲ್ಲೆಯಲ್ಲಿ 120 ಲಿಟ್ಲ್ ಕೈಟ್ಸ್ ಘಟಕಗಳು ಕಾರ್ಯಾಚರಿಸುತ್ತಿವೆ.

Leave a Reply

Your email address will not be published. Required fields are marked *

You cannot copy content of this page