ಲೀಗಲ್ ಮೆಟ್ರೋಲಜಿ ಇಲಾಖೆಯಿಂದ ರಾತ್ರಿ ಕಾಲ ತಪಾಸಣೆ
ಕಾಸರಗೋಡು: ಲೀಗಲ್ ಮೆಟ್ರೋಲಜಿ ಇಲಾಖೆ ಜಿಲ್ಲೆಯಲ್ಲಿ ರಾತ್ರಿ ಕಾಲ ತಪಾಸಣೆಗೆ ಎರಡು ಸ್ಕ್ವಾಡ್‌ಗಳನ್ನು ರೂಪೀಕರಿಸಿ ಕಾರ್ಯಾರಂಭಗೊಳಿಸಿದೆ. ಶಬರಿಮಲೆ, ಕ್ರಿಸ್ಮಸ್, ಹೊಸ ವರ್ಷಾಚರಣೆ, ಬೇಕಲ್ ಫೆಸ್ಟ್ ಪರಿಗಣಿಸಿ ವ್ಯಾಪಾರ ಸಂಸ್ಥೆಗಳಲ್ಲೂ, ಪೆಟ್ರೋಲ್ ಬಂಕ್‌ಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಉತ್ತರ ವಲಯ ಜೋಯಿಂಟ್ ಕಂಟ್ರೋಲರ್ ಪಿ. ಶ್ರೀನಿವಾಸರ ನಿರ್ದೇಶ ಪ್ರಕಾರ ಡೆಪ್ಯೂಟಿ ಕಂಟ್ರೋಲರ್ ಎಸ್‌ಎಸ್ ಅಭಿಲಾಷ್, ಟಿ.ಕೆ. ಕೃಷ್ಣ ಕುಮಾರ್ ನೇತೃತ್ವದಲ್ಲಿ ಸ್ಕ್ವಾಡ್ ರೂಪೀಕರಿಸಲಾಗಿದೆ. ಅಸಿಸ್ಟೆಂಟ್ ಕಂಟ್ರೋಲರ್ ಎಂ. ರತೀಶ್, ಇನ್ಸ್‌ಪೆಕ್ಟರ್‌ಗಳಾದ ಶಶಿಕಲ, ರಮ್ಯ, ವಿದ್ಯಾಧರನ್, ಪವಿತ್ರನ್, ಶ್ರೀಜಿತ್, ಅಜಿತ್ ಕುಮಾರ್, ಸೀತು ತಪಾಸಣೆಯಲ್ಲಿ ಭಾಗವಹಿಸುತ್ತಿದ್ದಾರೆ.