ಲೀಗ್ ಸದಸ್ಯ ರಾಜೀನಾಮೆ ಹಿಂದೆ ಸಿಪಿಎಂ ಪಿತೂರಿ- ಬಿಜೆಪಿ ಆರೋಪ
ಪೈವಳಿಕೆ: ಪಂಚಾಯತ್ನ ಎರಡನೇ ವಾರ್ಡ್ ಮುಸ್ಲಿಂ ಲೀಗ್ ಸದಸ್ಯೆಯನ್ನು ಸಿಪಿಎಂ ಆಮಿಷ ಒಡ್ಡಿ ರಾಜೀನಾಮೆ ನೀಡುವಂತೆ ಮಾಡಿದೆ ಎಂದು ಬಿಜೆಪಿ ಪಂ. ಸಮಿತಿ ಆರೋಪಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಕಳಂಕವೆಂದೂ ಬಿಜೆಪಿ ತಿಳಿಸಿದೆ. ರಾಜೀನಾಮೆಯ ಹಿಂದಿನ ಪಿತೂರಿಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಪಂಚಾಯತ್ ಅಧಿಕಾರಿಗಳನ್ನು ಬಿಜೆಪಿ ಆಗ್ರಹಿಸಿದೆ.
ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಂ. ನೋರ್ತ್ ಸಮಿತಿ ಅಧ್ಯಕ್ಷ ಲೋಕೇಶ್ ನೋಂಡಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಕರ್ಷಕ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಚಂದ್ರ ಬಲ್ಲಾಳ್, ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಸದಾಶಿವ ಚೇರಾಲು, ಪೈವಳಿಕೆ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಲತಾ ಮಾತನಾಡಿದರು.
ಬ್ಲೋಕ್ ಸದಸ್ಯೆ ಚಂದ್ರಾವತಿ ಕೆ, ಪಂಚಾಯತ್ ಸದಸ್ಯರಾದ ಜಯಲಕ್ಷ್ಮಿ ಭಟ್, ಕಮಲ, ಮಮತ, ಸೀತಾರಾಮ ಶೆಟ್ಟಿ, ಮಂಜುನಾಥ ಹಾಜರಿದ್ದರು. ಸತ್ಯಶಂಕರ ಸ್ವಾಗತಿಸಿ, ಹರಿಣಾಕ್ಷ ವಂದಿಸಿದರು. ಸುಬ್ರಹ್ಮಣ್ಯ, ಕೀರ್ತಿ ಭಟ್, ವಿಘ್ನೇಶ್ವರ ಕೆದುಕೋಡಿ, ಕಿಶೋರ್ ಕುಮಾರ್ ರೈ, ಗೋಪಾಲ ಸಪಲ್ಯ ಉಪಸ್ಥಿತರಿದ್ದರು.