ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ವಯನಾಡ್‌ನಲ್ಲಿ ಮತ್ತೆ ರಾಹುಲ್ ಗಾಂಧಿ ಸ್ಪರ್ಧೆ

ತಿರುವನಂತಪುರ: ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಮಂಡಲದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ರಾಹುಲ್ ಗಾಂಧಿ ಮತ್ತೆ ಸ್ಪರ್ಧಿಸಲಿದ್ದಾರೆ. ಕೇರಳದ ಹೊಣೆ ಗಾರಿಕೆಯುಳ್ಳ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಈ ಬಗ್ಗೆ ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕರ್ನಾಟಕ ಅಥವಾ ತಮಿಳುನಾಡಿ ನಲ್ಲಿ ಸ್ಪರ್ಧಿಸಲಿದ್ದಾರೆಂಬ ಪ್ರಚಾರಗಳ ಮಧ್ಯೆ ತಾರಿಖ್ ಅನ್ವರ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಪ್ರಸ್ತುತದ ಪರಿಸ್ಥಿತಿಯಲ್ಲಿ ವಯನಾಡು ಮಂಡಲ ಕಾಂಗ್ರೆಸ್‌ಗೆ ಸುರಕ್ಷಿತವಾ ಗಿದೆ. ಆದ್ದರಿಂದ ಬೇರೆ ಮಂಡಲದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ   ಲೋಕ ಸಭಾ ಚುನಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಗಮನ ಹರಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾನ, ಛತ್ತೀಸ್‌ಗಢ್, ಮಿಝೋರಾಂ ಎಂಬೀ ಐದು ರಾಜ್ಯಗಳ ವಿಧಾನ ಸಭಾ ಚುನಾವಣೆ ನಾಳೆಗೆ ಪೂರ್ತಿ ಯಾಗಲಿದೆ. ತೆಲಂಗಾನದಲ್ಲಿ ನಾಳೆ ಚುನಾವಣೆ ನಡೆಯಲಿರುವುದು. ಆದಿತ್ಯವಾರ ಮತಎಣಿಕೆ ನಡೆಯ ಲಿದೆ. ಚುನಾವಣೆ ಫಲಿತಾಂಶ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿ ರುವ ಲೋಕಸಭಾ ಚುನಾವಣೆಗೆ ನಿರ್ಣಾಯಕವಾಗಲಿದೆ. ಫಲಿತಾಂಶ ಬಿಜೆಪಿಗೆ ಅನುಕೂಲವಾಗಿದ್ದಲ್ಲಿ ಲೋಕಸಭಾ ಚುನಾವಣೆ ಅವಧಿಗಿಂತ ಮೊದಲೇ ನಡೆಸುವ ಸಾಧ್ಯತೆ ಇದೆ ಎಂದು ರಾಜಕೀಯ ರಂಗದಲ್ಲಿ ಚರ್ಚೆ ಸಕ್ರಿಯಗೊಂಡಿದೆ. ವಿಧಾನ ಸಭಾ ಚುನಾವಣೆ ನಡೆದ ಮಧ್ಯ ಪ್ರದೇಶದಲ್ಲಿ ಬಿಜೆಪಿ, ರಾಜಸ್ಥಾನದಲ್ಲಿ ಕಾಂಗ್ರೆಸ್ ಪ್ರಸ್ತುತ ಆಡಳಿತ ನಡೆಸುತ್ತಿದೆ. ಛತ್ತೀಸ್‌ಗಢದಲ್ಲೂ ಕಾಂಗ್ರೆಸ್ ಆಡಳಿತವಿದ್ದು, ಮಿಝೋ ರಾಂನಲ್ಲಿ  ಎನ್‌ಡಿಎ ಆಡಳಿತ ನಡೆಸುತ್ತಿದೆ. ನಾಳೆ ಚುನಾವಣೆ ನಡೆಯುವ ತೆಲಂಗಾನದಲ್ಲಿ ಬಿಆರ್‌ಎಸ್ ಆಡಳಿತದಲ್ಲಿದೆ.

Leave a Reply

Your email address will not be published. Required fields are marked *

You cannot copy content of this page