ಲೋಕಸಭಾ ಚುನಾವಣೆ: ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ
ಉಪ್ಪಳ: ಲೋಕಸಭಾ ಚುನಾವಣೆ ಸಮೀಪಿಸುತ್ತಿ ದ್ದಂತೆ ಕಾಸರಗೋಡು ಕ್ಷೇತ್ರದ ವಿವಿಧ ಪಕ್ಷದ ಅಭ್ಯರ್ಥಿಗಳ ಪ್ರಚಾರ ಬಿರುಸುನಿಂದ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ, ಯು.ಡಿ.ಎಫ್ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್, ಎಡರಂಗ ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ಮಾಸ್ತರ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್ ನಿನ್ನೆ ಕುಂಬಳೆ ಆರಿಕ್ಕಾಡಿ ಕುಂಬೋಳ್ ತಂಙಳ್, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ, ಆವಳ ಮಠ, ಉದ್ಯಾವರ ಮಾಡ ಕ್ಷೇತ್ರ, ಸಾವಿರ ಜಮಾಯತ್ ಮಸೀದಿ ಸಹಿತ ವಿವಿಧ ಧಾರ್ಮಿಕ ಕ್ಷೇತ್ರ, ಹಿರಿಯರ ಭೇಟಿ ಮಾಡಿ ಆಶೀರ್ವಾದ ಪಡೆದರು. ನಾಳೆ ನಾಮಪತ್ರ ಸಲ್ಲಿಸಲಾಗುವುದೆಂದು ನೇತಾರರು ತಿಳಿಸಿದ್ದಾರೆ.
ಅದೇ ರೀತಿ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ನಿನ್ನೆ ಬೆಳಿಗ್ಗೆ ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದಲ್ಲಿ ಪ್ರಾರ್ಥಿಸಿ ಬಳಿಕ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರ ಸಹಿತ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಸಮುದ್ರ ತೀರ ಪ್ರದೇಶ ಹಾಗೂ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿ ರಾತ್ರಿ ವರ್ಕಾಡಿಯ ಬೇಕರಿ ಜಂಕ್ಷನ್ನಲ್ಲಿ ಬೈಕ್ ರ್ಯಾಲಿ, ರೋಡ್ಶೋ, ಪಂಚಾಯತ್ ಚುನಾವಣಾ ಕಚೇರಿ ಉದ್ಘಾಟಿಸಿದರು. ಬಿಜೆಪಿ ನೇತಾರ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.
ಎಡರಂಗ ಅಭ್ಯರ್ಥಿ ಎಂ.ವಿ ಬಾಲಕೃಷ್ಣ ಮಾಸ್ತರ್ ವಿವಿಧ ಕಡೆಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದ, ಎಣ್ಮಕಜೆ ಪಂ.ನ ಕಾಟುಕುಕ್ಕೆಯಿಂದ ಪರ್ಯಟನೆ ಆರಂಭಿಸಿದರು. ಬಳಿಕ ಪೆರ್ಲ, ಬೆದ್ರಂಪಳ್ಳ, ಬಾಡೂರು, ಕಟ್ಟತ್ತಡ್ಕ, ಸೀತಾಂಗೋಳಿ, ಮೊಗ್ರಾಲ್, ಕುಂಬಳೆ, ಕಳತ್ತೂರು, ಪೈವಳಿಕೆ, ಮೀಯಪದವು, ಚಿಗುರುಪಾದೆ, ಮಜೀರ್ಪಳ್ಳ ಮೂಲಕ ಸುಳ್ಯಮೆಯಲ್ಲಿ ಸಮಾಪ್ತಿಗೊಂಡಿತು. ಕಾಟುಕುಕ್ಕೆಯಲ್ಲಿ ಶಾಸಕ ಸಿ.ಎಚ್. ಕುಞಂಬು ಉದ್ಘಾಟಿಸಿದರು. ವಿವಿಧ ಕಡೆಗಳಲ್ಲಿ ಎಡರಂಗ ರಾಜ್ಯ ಸಂಚಾಲಕ ಇ.ಪಿ. ಜಯರಾಜನ್, ಗೋವಿಂದನ್ ಪಳ್ಳಿಕಾಪಿಲ್,, ಕೆ.ವಿ. ಕುಂಞಿರಾಮನ್, ವಿ.ವಿ. ರಮೇಶನ್, ರಾಮಕೃಷ್ಣ ಕಡಂಬಾರು, ಕೆ.ಆರ್. ಜಯಾನಂದ, ಬೇಬಿ ಬಾಲಕೃಷ್ಣನ್, ಅಜಿತ್ ಎಂ.ಸಿ, ಪಿ. ರಘುದೇವನ್ ಮಾಸ್ತರ್, ಬಿ. ಸುಬ್ಬಣ್ಣ ಆಳ್ವ, ಸಿ.ಎ. ಸುಬೈರ್, ಜಯರಾಮ ಬಲ್ಲಂಗುಡೇಲು, ಅಬ್ದುಲ್ ರಜಾಕ್ ಚಿಪ್ಪಾರು, ರಾಘವ ಚೇರಾಲ್ ಭಾಗವಹಿಸಿದರು.