ವಂದೇ ಭಾರತ್ ರೈಲಿಗೆ ಮತ್ತೆ ಕಲ್ಲುತೂರಾಟ
ಕಾಸರಗೋಡು: ಕಾಸರಗೋಡು-ತಿರುವನಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ನಿನ್ನೆ ಮತ್ತೆ ಕಲ್ಲು ತೂರಾಟ ನಡೆದಿದೆ. ಈ ರೈಲು ನಿನ್ನೆ ಮುಂಜಾನೆ ೨.೩೦ಕ್ಕೆ ಕಾಸರಗೋಡಿನಿಂದ ತಿರುವನಂತಪುರದತ್ತ ಪ್ರಯಾಣ ಆರಂಭಿಸಿತ್ತು. ಅದು ತಲಶ್ಶೇರಿ ಕಳೆದು ಮಾಹಿಯತ್ತ ಸಾಗುತ್ತಿರುವ ದಾರಿ ಮಧ್ಯೆ ನಿನ್ನೆ ಅಪರಾಹ್ನ ೩.೪೩ರ ವೇಳೆ ಅದರ ಮೇಲೆ ಕಲ್ಲು ತೂರಾಟ ನಡೆದಿದೆ. ಇದ ರಿಂದ ರೈಲಿನ ಒಂದು ಹವಾ ನಿಯಂತ್ರಣ ಬೋಗಿಯ ಗಾಜು ಹಾನಿಗೊಂಡಿದೆ. ಆದರೆ ಯಾರಿಗೂ ಗಾಯ ಉಂಟಾಗಿಲ್ಲ. ಬಳಿಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹಾನಿ ಗೊಂಡ ಕಿಟಿಕಿ ಬಾಗಿಲಿಗೆ ಪ್ಲಾಸ್ಟಿಕ್ ಟಾಫ್ ಅಂಟಿಸಿ ತಾತ್ಕಾಲಿಕ ಪರಿಹಾರ ಕಂಡುಕೊಂ ಡರು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಗಾಡಿಗೆ ಕಲ್ಲು ತೂರಾಟ ನಡೆಯುತ್ತಿರುವುದು ಇದು ಸತತ ನಾಲ್ಕನೇ ಬಾರಿಯಾಗಿದೆ.