ವಡಗರ ಲೋಕಸಭಾ ಕ್ಷೇತ್ರದ ಒಲವು ಎತ್ತ?

ವಡಗರ: ಕೇರಳದ ಉತ್ತರ ಭಾಗದಲ್ಲಿರುವ ಒಂದು ಲೋಕಸಭಾ ಕ್ಷೇತ್ರವಾಗಿದೆ ವಡಗರ. ತಲಶ್ಶೇರಿ, ಕೂತ್ತುಪರಂಬ, ವಡಗರ, ಕುಟ್ಯಾಡಿ, ನಾದಾಪುರಂ, ಕೊಲಾಂಡಿ ಮತ್ತು ಪರಂಬ ಎಂಬೀ ಏಳು ವಿಧಾನಸಭಾ ಕ್ಷೇತ್ರಗಳು ಒಳಗೊಂಡಿರುವ ಲೋಕಸಭಾ ಕ್ಷೇತ್ರವಾಗಿದೆ ವಡಗರ.

ಈ ಸಲದ ಲೋಕಸಭಾ ಚುನಾ ವಣೆಯಲ್ಲಿ ಈ ಕ್ಷೇತ್ರದಲ್ಲಿ ಯುಡಿಎಫ್ ಉಮೇದ್ವಾರರಾಗಿ ಕಾಂಗ್ರೆಸ್‌ನ ಶಾಫಿ ಪರಂಬಿಲ್, ಎಡರಂಗ ಉಮೇದ್ವಾರ ರಾಗಿ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮತ್ತು ಎನ್‌ಡಿಎ ಉಮೇದ್ವಾರ ರಾಗಿ ಬಿಜೆಪಿಯ ಸಿ.ಆರ್. ಪ್ರಫುಲ್‌ಕೃಷ್ಣ ಸ್ಪರ್ಧಿಸುತ್ತಿದ್ದಾರೆ. ಈ ಮೂವರು ಅಚಲ ಗೆಲುವಿನ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

೨೦೧೯ರ ಲೋಕಸಭಾ ಚುನಾವಣೆ ಯಲ್ಲಿ ಈ ಕ್ಷೇತ್ರದಲ್ಲಿ ಯುಡಿಎಫ್ (ಕಾಂಗ್ರೆಸ್) ಉಮೇದ್ವಾರರಾಗಿ ಸ್ಪರ್ಧಿಸಿದ್ದ ಕೆ. ಮುರಳೀಧರನ್ ೮೪,೬೬೩ ಮತಗಳ ಅಂತರದಲ್ಲಿ ಗೆದ್ದಿದ್ದರು. ಅಂದು ಅವರಿಗೆ ಒಟ್ಟು ೫,೨೬,೭೫೫ ಮತಗಳು ಲಭಿಸಿದ್ದವು.

ಎಡರಂಗದ ಉಮೇದ್ವಾರರಾಗಿ ಸ್ಪರ್ಧಿಸಿದ್ದ ಸಿಪಿಎಂನ ಪಿ. ಜಯರಾಜನ್‌ರಿಗೆ ೪,೪೨,೦೯೨ ಮತ್ತು ಎನ್‌ಡಿಎ (ಬಿಜೆಪಿ) ಅಭ್ಯರ್ಥಿ ವಿ.ಕೆ. ಸಜೀವನ್‌ರಿಗೆ ೮೦,೧೨೮ ಮತಗಳು ಲಭಿಸಿದ್ದುವು.

೨೦೦೯ ಹಾಗೂ ೨೦೧೪ರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮುಲ್ಲಪಳ್ಳಿ ರಾಮಚಂದ್ರನ್ ಗೆದ್ದಿದ್ದರು. ೨೦೦೪ರಲ್ಲಿ ಸಿಪಿಎಂನ ಪಿ. ಸತಿ ದೇವಿ, ೧೯೯೮ರಲ್ಲಿ ಸಿಪಿಎಂನ ಎ.ಕೆ. ಪ್ರೇಮಚಂದ್, ೧೯೯೬ರಲ್ಲಿ ಸಿಪಿಎಂನ ಒ. ಭರತನ್, ೧೯೮೯, ೧೯೮೪,  ೧೯೮೦, ೧೯೭೭ ಮತ್ತು ೧೯೭೧ರಲ್ಲಿ ಕಾಂಗ್ರೆಸ್‌ನ ಕೆ.ಪಿ. ಉಣ್ಣಿಕೃಷ್ಣನ್ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ೧೯೬೭ರಲ್ಲಿ ಎಸ್‌ಆರ್‌ಪಿಯ ಅರಂಗಿಲ್ ಶ್ರೀಧರನ್, ೧೯೬೨ ವಿ.ವಿ. ರಾಘವನ್ (ಪಕ್ಷೇತರ) ಮತ್ತು ೧೯೫೭ರಲ್ಲಿ ಪಿ.ಎಸ್.ಪಿಯ ಕೆ.ಬಿ. ಮೆನೋನ್  ಗೆದ್ದಿದ್ದರು.

೨೦೧೯ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಕೆ.ಮುರಳೀಧರನ್‌ರನ್ನು ಕೊನೆಯ ಕ್ಷಣದಲ್ಲಿ ವಡಗರದ ಬದಲು ತ್ರಿಶೂರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯನ್ನಾಗಿ ಕಾಂಗ್ರೆಸ್ ಕಣಕ್ಕಿಳಿಸಿದೆ.

ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ನಾನು ತಿರುವನಂತಪುರ ಜಿಲ್ಲೆಯ ‘ನೇಮಂ’ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದುದೇ ಆ ಕ್ಷೇತ್ರದಲ್ಲಿ ಬಿಜೆಪಿಯ ಸೋಲಿಗೆ ಪ್ರಧಾನ ಕಾರಣವಾಗಿತ್ತು. ಆದ್ದರಿಂದ ನಾನು ಈ ಬಾರಿ ವಡಗರ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿದ್ದಲ್ಲಿ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಉಂಟಾದ ಪರಾಭವದ ಪ್ರತೀಕಾರ ತೀರಿಸಲು ಬಿಜೆಪಿಯವರು ಅವರ ಮತಗಳನ್ನು ಎಡರಂಗಕ್ಕೆ ನೀಡಿ ಆ ಮೂಲಕ ನನ್ನನ್ನು ಸೋಲಿಸುವ ಸಾಧ್ಯತೆ ಇತ್ತೆಂದೂ ಮುರಳೀಧರನ್ ಇತ್ತೀಚೆಗೆ ಹೇಳಿದ್ದರು. ಅವರು ಈ ಕ್ಷೇತ್ರವನ್ನು ಬಿಟ್ಟು ಈ ಬಾರಿ ತ್ರಿಶೂರಿನಲ್ಲಿ ಸ್ಪರ್ಧೆಗಿಳಿಸುವುದರ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ವಡಗರ ಕ್ಷೇತ್ರದಲ್ಲಿ ಯುಡಿಎಫ್, ಎಲ್‌ಡಿಎಫ್ ಮತ್ತು ಎನ್‌ಡಿಎ ಮಧ್ಯೆ ಈ ಬಾರಿ ಪ್ರಬಲ ಪೈಪೋಟಿ ಏರ್ಪ ಟ್ಟಿದೆ. ಯುಡಿಎಫ್, ಎಲ್‌ಡಿಎಫ್ ಮತ್ತು ಪಕ್ಷೇತರರನ್ನು ಈ ಹಿಂದೆ ಆರಿಸಿದ ರಾಜಕೀಯ ಇತಿಹಾಸ ಹೊಂ ದಿರುವ ವಡಗರ ಈ ಚುನಾವಣೆಯಲ್ಲಿ ಯಾರ ಜತೆಗೆ ನಿಲ್ಲಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page