ವಯನಾಡು ಸಂತ್ರಸ್ತರಿಗೆ ಸಹಾಯ: ಜಿಲ್ಲೆಯಲ್ಲಿಂದು ಖಾಸಗಿ ಬಸ್ಗಳ ಸಾಂತ್ವನ ಯಾತ್ರೆ
ಕಾಸರಗೋಡು: ವಯನಾಡ್ನಲ್ಲಿ ಸಂಭವಿಸಿದ ಭೀಕರ ಭೂಕುಸಿತ ದುರಂತದಿಂದ ನಾಶನಷ್ಟ ಸಂಭವಿಸಿದವರಿಗೆ ಸಹಾಯವೊದಗಿಸುವ ಅಂಗವಾಗಿ ಕೇರಳ ಸ್ಟೇಟ್ ಪ್ರೈವೇಟ್ ಬಸ್ ಓನರ್ಸ್ ಫೆಡರೇಶನ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಇಂದು ಸಾಂತ್ವನ ಯಾತ್ರೆ ನಡೆಯುತ್ತಿದೆ.
ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಧ್ವಜ ಹಾರಿಸಿ ಸಾಂತ್ವನ ಯಾತ್ರೆಗೆ ಚಾಲನೆ ನೀಡಿದರು. ಬಸ್ ಮಾಲಕರ ಸಂಘದ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್ ಅಧ್ಯಕ್ಷತೆ ವಹಿಸಿದರು. ಶಾಸಕ ಸಿ.ಎಚ್. ಕುಂಞಂಬು, ಕಾಞಂಗಾಡ್ ಸಬ್ ಕಲೆಕ್ಟರ್ ಸೂಫಿಯಾನ್ ಅಹಮ್ಮದ್, ಕಾಸರಗೋಡು ಆರ್ಟಿಒ ಸಜಿ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಜೋಯ್, ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್, ಸಂಘಟನೆಯ ಕಾಸರಗೋಡು ತಾಲೂಕು ಕಾರ್ಯದರ್ಶಿ ಸಿ.ಎ. ಮೊಹಮ್ಮದ್ ಕುಂಞಿ, ಜಿಲ್ಲಾ ಜತೆ ಕಾರ್ಯದರ್ಶಿ ಶಂಕರ ನಾಯ್ಕ್, ಉಪಾಧ್ಯಕ್ಷ ಪಿ.ಎ. ಮುಹಮ್ಮದ್ ಕುಂಞಿ, ಎಸ್ಟಿಯು ರಾಜ್ಯ ಕಾರ್ಯದರ್ಶಿ ಶರೀಫ್ ಕೊಡವಂಜಿ ಮೊದಲಾದವರು ಉಪಸ್ಥಿತರಿದ್ದರು. ಕಾಸರಗೋಡು ತಾಲೂಕು ಬಸ್ ಆಪರೇಟರ್ಸ್ ಫೆಡರೇಶನ್ ಕಾರ್ಯದರ್ಶಿ ಸಿ.ಎ. ಮುಹಮ್ಮದ್ ಕುಂಞಿ ಸ್ವಾಗತಿಸಿದರು.
ಜಿಲ್ಲೆಯಲ್ಲಿ ಪಂಚಾಯತ್ನ ಎಲ್ಲಾ ಖಾಸಗಿ ಬಸ್ಗಳು ಇಂದು ಸಂಗ್ರಹವಾಗುವ ಹಣವನ್ನು ಸಂಘಟನೆಯ ರಾಜ್ಯ ಸಮಿತಿಗೆ ಹಸ್ತಾಂತರಿಸಲಾಗುವುದು. ಈ ಹಣವನ್ನು ಬಳಸಿ ವಯನಾಡು ಸಂತ್ರಸ್ತರಿಗಾಗಿ 25 ಮನೆಗಳನ್ನು ನಿರ್ಮಿಸಿ ಕೊಡಲು ನಿರ್ಧರಿಸಲಾಗಿದೆ.