ವಯನಾಡ್ಗೆ ಪ್ರಧಾನಮಂತ್ರಿ ಸಂದರ್ಶನ: ಎಲ್ಲೆಡೆ ಬಿಗು ಭದ್ರತೆ
ಹೊಸದಿಲ್ಲಿ: ಭೂ ಕುಸಿತ ಹಾಗೂ ಪ್ರವಾಹದಿಂದ ತತ್ತರಿಸಿ ರುವ ದುರಂತ ಭೂಮಿಯಾದ ವಯನಾಡಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಸಂದರ್ಶಿಸುವರು. ಭೂ ಕುಸಿತದಿಂದ ಸಂಪೂರ್ಣವಾಗಿ ಕೊಚ್ಚಿ ಹೋಗಿ ರುವ ಮುಂಡಕೈ ಮತ್ತು ಚೂರ ಲ್ಮಲೆಗೆ ಪ್ರಧಾನಮಂತ್ರಿಯವರು ಸಂದರ್ಶನದಲ್ಲಿ ಹೆಚ್ಚು ಒತ್ತು ನೀಡಲಾಗಿದೆ.
ಪ್ರಧಾನಮಂತ್ರಿಯವರ ಸಂದರ್ಶನದ ಹಿನ್ನೆಲೆಯಲ್ಲಿ ಅಗತ್ಯದ ಭದ್ರತೆ ಏರ್ಪಡಿಸಲು ಕೇಂದ್ರ ಭದ್ರತಾ ಪಡೆ ಈಗಾಗಲೇ ವಯನಾಡಿಗೆ ಆಗಮಿಸಿ ಅಗತ್ಯದ ಕ್ರಮದಲ್ಲಿ ತೊಡಗಿವೆ. ಹೊಸದಿಲ್ಲಿ ಯಿಂದ ವಿಮಾನದಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಪ್ರಧಾನಿಯವರು ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ವಯನಾಡಿಗೆ ತೆರಳುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಕೇರಳಕ್ಕೆ ಈ ತನಕ ಲಭಿಸಿಲ್ಲ.
ದುರಂತ ಭೂಮಿಯ ಸಂದರ್ಶನದ ಬಳಿಕ ಪ್ರಧಾನಿಯವರು ಉನ್ನತ ಮಟ್ಟದ ಅಧಿಕಾರಿಗಳೊಂದಿಗೂ ಚರ್ಚೆ ನಡೆಸುವರು. ಪ್ರಧಾನಮಂತ್ರಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಅವರ ಭದ್ರತಾ ಸಿಬ್ಬಂದಿಗಳು ಈಗಾಗಲೇ ವಯನಾಡಿಗೆ ಆಗಮಿಸಿ ಅಗತ್ಯದ ಕ್ರಮೀಕರಣಗಳ ಬಗ್ಗೆ ಅವಲೋಕನ ನಡೆಸಿದ್ದಾರೆ. ಸಂದರ್ಶನ ಪೂರ್ಣಗೊಂಡ ಬಳಿಕ ದುರಂತ ಭೂಮಿಯ ಪುನರ್ವಸತಿಗಾಗಿರುವ ವಿಶೇಷ ಪ್ಯಾಕೇಜನ್ನು ಘೋಷಿಸುವ ಸಾಧ್ಯತೆ ಇದೆ. ಪ್ರಧಾನಿಯವರ ಭದ್ರತೆಗಾಗಿ ಕಾಸರಗೋಡು ಸೇರಿದಂತೆ ಇತರ ಹಲವು ಜಿಲ್ಲೆಗಳ ಪೊಲೀಸರನ್ನು ವಯನಾಡಿಗೆ ಕಳುಹಿಸಿಕೊಡಲಾಗಿದೆ.