ವಯೋಮಿತಿಯನ್ನು ಮುಖ್ಯಮಂತ್ರಿಗೆ ಅನ್ವಯಗೊಳಿಸದಿರಲು ಸಿಪಿಎಂ ತೀರ್ಮಾನ

ನವದೆಹಲಿ:ನಿಗದಿತ ವಯೋಮಿತಿ ಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಅನ್ವಯಗೊಳಿಸದಿರಲು ಸಿಪಿಎಂ ಕೇಂದ್ರ ನೇತೃತ್ವ ತೀರ್ಮಾ ನಿಸಿದೆ. ಮಾತ್ರವಲ್ಲ ಸಿಪಿಎಂ ಪೋಲಿಟ್ ಬ್ಯೂರೋದಲ್ಲಿ ಮುಂದುವರಿಯಲು ನಿಗದಿಪಡಿಸಲಾಗುವ ವಯೋಮಿತಿ ವ್ಯಾಪ್ತಿಯಿಂದ ಪಿಣರಾಯಿ ವಿಜಯನ್ ರನ್ನು ಹೊರತುಪಡಿಸುವ ತೀರ್ಮಾನಕ್ಕೆ ಪಕ್ಷ ಬಂದಿದೆ.  ಸಿಪಿಎಂನಲ್ಲಿ ಕಾರ್ಯ ವೆಸಗಲು ಹಾಗೂ ಅಧಿಕಾರ ಸ್ಥಾನದಲ್ಲಿ ಮುಂದುವರಿಯಲಿರುವ ವಯೋಮಿತಿ ಯನ್ನು ೭೫ ವರ್ಷವಾಗಿ ನಿಗದಿಪಡಿಸ ಲಾಗಿದೆ. ಈ ವಯೋಮಿತಿ ಮೀರುವ ಪಕ್ಷದ ನೇತಾರರು ಹಾಗೂ ಕಾರ್ಯ ಕರ್ತರನ್ನು ಪಕ್ಷದ ಹಾಗೂ ಅಧಿಕಾರ ಸ್ಥಾನದಿಂದ ಹೊರತುಪಡಿ ಸಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ವಿಷಯ ದಲ್ಲಿ ಇಂತಹ ನಿಬಂಧನೆಯನ್ನು  ಸಡಿಲಿಸಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಹಾಗೂ ಪೋಲಿಟ್ ಬ್ಯೂರೋ ಸದಸ್ಯರಾಗಿ ಇನ್ನೂ ಮುಂದುವರಿಯಲು ಸಿಪಿಎಂ ಈಗ ಆಸ್ಪದ ನೀಡುವ ರೀತಿಯಲ್ಲಿ ಅವಕಾಶ ಕಲ್ಪಿಸಿದೆ. ಭಾರತದಲ್ಲಿ ಸಿಪಿಎಂ ಆಡಳಿತದಲ್ಲಿರುವ ಏಕೈಕ ರಾಜ್ಯವಾಗಿದೆ ಕೇರಳ. ಈ ಹಿಂದೆ ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿ ಹಲವು ವರ್ಷಗಳಿಂದ ಸಿಪಿಎಂ ಆಡಳಿತ ನಡೆಸಿತ್ತು. ಈಗ ಆ ಎರಡೂ ರಾಜ್ಯಗಳಲ್ಲಿ ಸಿಪಿಎಂ ಅಧಿಕಾರ ನಷ್ಟಗೊಂಡು ಅಪ್ರತ್ಯಕ್ಷ ಗೊಂಡಿದೆ. ಆ ಹಿನ್ನೆಲೆಯಲ್ಲಿ  ಕೇರಳದಲ್ಲಾ ದರೂ ಈಗ ಇರುವ ತಮ್ಮ ಆಡಳಿತವನ್ನು ಉಳಿಸಿಕೊಳ್ಳುವುದರ ಜತೆಗೆ ಮುಂದಿನ ಚುನಾವಣೆಯಲ್ಲ್ಲಿ ಗೆದ್ದುಕೊಳ್ಳುವಂತೆ   ಒಂದು ರಣತಂತ್ರವೆಂಬಂತೆ ಪಿಣರಾಯಿ ವಿಜಯನ್‌ರಿಗೆ ವಯೋಮಿತಿಯಲ್ಲಿ ರಿಯಾಯಿತಿ ನೀಡುವ ತೀರ್ಮಾನಕ್ಕೆ ಸಿಪಿಎಂ ಈಗ ಬಂದಿದೆ.

Leave a Reply

Your email address will not be published. Required fields are marked *

You cannot copy content of this page