ವರದಕ್ಷಿಣೆಗಾಗಿ ಯುವತಿಗೆ ಕಿರುಕುಳ : ಪತಿ ಸಹಿತ ಮೂವರ ವಿರುದ್ಧ ಕೇಸು

ಉಪ್ಪಳ: ವರದಕ್ಷಿಣೆಗಾಗಿ ಒತ್ತಾಯಿಸಿ ಯುವತಿಗೆ ಕಿರುಕುಳ ನೀಡಿದ ಆರೋಪದಂತೆ ಆಕೆಯ ಪತಿ ಸಹಿತ ಮೂರು ಮಂದಿ ವಿರುದ್ಧ ನ್ಯಾಯಾಲಯದ ನಿರ್ದೇಶ ಮೇರೆಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಉಪ್ಪಳ ಕೋಡಿಬೈಲು ನಿವಾಸಿ ಬಾಬು ಎಂಬವರ ಪುತ್ರಿ ವನಿತ ಕುಮಾರಿ ನೀಡಿದ  ದೂರಿನಂತೆ ಈಕೆಯ ಪತಿ ಕರ್ನಾಟಕದ ಕುತ್ತಡ್ಕ ನಿವಾಸಿ ರಕ್ಷಿತ್ (೩೪), ಈತನ ತಾಯಿ ಪದ್ಮಾವತಿ (೫೫), ಸಹೋದರ ರಾಹುಲ್ (೩೦) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.

೨೦೨೧ ಫೆಬ್ರವರಿಯಲ್ಲಿ ವನಿತ ಕುಮಾರಿ ಹಾಗೂ ರಕ್ಷಿತ್‌ರ ಮದುವೆ ನಡೆದಿತ್ತು. ಈ ವೇಳೆ ೨೦ ಪವನ್ ಚಿನ್ನಾಭರಣ ಹಾಗೂ ೧ ಲಕ್ಷ ರೂಪಾಯಿ ನೀಡಲಾಗಿತ್ತೆನ್ನಲಾಗಿದೆ. ಆದರೆ ಅನಂತರ ಹೆಚ್ಚುವರಿ ವರದಕ್ಷಿಣೆ ಗಾಗಿ ಒತ್ತಾಯಿಸಿ ಪತಿ ಸಹಿತ ಮೂವರು ಕಿರುಕುಳ ನೀಡಿದ್ದಾರೆಂದು ದೂರಲಾಗಿದೆ. ಇದರಿಂದ ತವರು ಮನೆಗೆ ಬಂದ ವನಿತ ಕುಮಾರಿ ಕಾಸರಗೋಡು ನ್ಯಾಯಾಲಯದಲ್ಲಿ ದೂರು ನೀಡಿದ್ದರು.  ಈ ಬಗ್ಗೆ  ಕೇಸು ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿತ್ತು. ಇದೇ ವೇಳೆ  ನ್ಯಾಯಾಲಯಕ್ಕೆ ದೂರು ನೀಡಿದ ವಿಷಯ ತಿಳಿದು ನವಂಬರ್ ೨೪ರಂದು ಕೋಡಿಬೈಲಿಗೆ ಬಂದ ರಕ್ಷಿತ್ ಪತ್ನಿ ವನಿತ ಕುಮಾರಿಗೆ ಹಲ್ಲೆಗೈದಿರುವುದಾಗಿಯೂ ದೂರಲಾಗಿದೆ.

Leave a Reply

Your email address will not be published. Required fields are marked *

You cannot copy content of this page