ವರ್ಕಾಡಿಯಲ್ಲಿ ಕಾಂಗ್ರೆಸ್ ಯಾರೊಂದಿಗೆ? ಕಾರ್ಯಕರ್ತರ ಪ್ರಶ್ನೆ

ಮಂಜೇಶ್ವರ: ವರ್ಕಾಡಿಯಲ್ಲಿ ಕಾಂಗ್ರೆಸ್ ನಾಯಕತ್ವ ಸಿಪಿಎಂನೊಂ ದಿಗೋ, ಅಥವಾ ಬಿಜೆಪಿಯೊಂದಿಗೋ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿ ದ್ದಾರೆ. ಇತ್ತೀಚೆಗೆ ನಡೆದ ವರ್ಕಾಡಿ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ವಿಭಾಗ ಸಿಪಿಎಂ ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಅದನ್ನು ಪ್ರತಿಭಟಿಸಿ ಮತ್ತೊಂದು ವಿಭಾಗ ಕಾಂಗ್ರೆಸ್‌ನವರು ಬಿಜೆಪಿಯೊಂದಿಗೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಮಾತ್ರವಲ್ಲದೆ, ಕಾಂಗ್ರೆಸ್- ಸಿಪಿಎಂ ಒಕ್ಕೂಟದ ೧೧ ಮಂದಿ ಅಭ್ಯರ್ಥಿಗಳನ್ನು ೫೦೦ರಷ್ಟು ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು.

ಚುನಾವಣೆಯ ಅಲ್ಪ ಮುಂಚೆ ಬಿಜೆಪಿಯೊಂದಿಗೆ ಒಕ್ಕೂಟ ರಚಿಸಿ ಸ್ಪರ್ಧಿಸಿದ ನಾಲ್ವರು ಕಾಂಗ್ರೆಸ್ ಸದಸ್ಯ ರನ್ನು ಡಿಸಿಸಿ ಅಧ್ಯಕ್ಷ ಹೊರ ಹಾಕಿದ್ದರು. ಸಮಸ್ಯೆಗೆ ಪರಿಹಾರ ಕಾಣಲು ಕಾಂಗ್ರೆಸ್ ಮಂಜೇಶ್ವರ ಬ್ಲೋಕ್ ಕಮಿಟಿಗೆ ಜಿಲ್ಲಾ ಕಮಿಟಿ, ನಿರ್ದೇಶಿಸಿತ್ತು. ಈ ನಿರ್ದೇಶದ ಆಧಾರದಲ್ಲಿ ಕಾಂಗ್ರೆಸ್ ಮಂಜೇಶ್ವರ ಬ್ಲೋಕ್ ಅಧ್ಯಕ್ಷ ಸೋಮಪ್ಪ ಬಂಡುಕೋರ ವಿಭಾಗಕ್ಕೆ ನೇತೃತ್ವ ನೀಡುತ್ತಿರುವುದಾಗಿ ಆರೋಪಿಸಿ ಕಾಂಗ್ರೆಸ್ ನೇತಾರರಾದ ಹರ್ಷಾದ್ ವರ್ಕಾಡಿ, ಅಬ್ದುಲ್ ಖಾದರ್ ಹಾಜಿ, ಹಾರಿಸ್ ಮಚ್ಚಂಪಾಡಿ ಎಂಬಿವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರ ಹಾಕಲಾಗಿತ್ತು.

ಚುನಾವಣೆಯಲ್ಲಿ ಬಂಡುಕೋರ ವಿಭಾಗ ಬ್ಯಾಂಕ್‌ನ ಆಡಳಿತ ಸಮಿತಿ ಯನ್ನು ಭಾರೀ ಬಹುಮತ ದೊಂದಿಗೆ ವಶಪಡಿಸಿಕೊಂಡುದರಿಂದ ಕೆಪಿಸಿಸಿ ಅಧ್ಯಕ್ಷರಿಗೆ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿತ್ತು. ಇದರಿಂದ ಮುಂದಿನ ಕ್ರಮಕ್ಕೆ ಡಿಸಿಸಿಗೆ ನಿರ್ದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತಾರ ರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲು ಬ್ಲಾಕ್ ಅಧ್ಯಕ್ಷರಿಗೆ ಅಧಿಕಾರ ನೀಡಿದವರು ಯಾರು ಎಂದು ಡಿಸಿಸಿ ನಾಯಕತ್ವ ಸ್ಪಷ್ಟೀಕರಣ ಕೇಳಿದೆ ಮಾತ್ರವಲ್ಲ, ಬ್ಲಾಕ್ ಅಧ್ಯಕ್ಷ ಕೈಗೊಂಡ ನೇತಾರರ ವಜಾ ಕ್ರಮವನ್ನು ಅಸಿಂಧು ಗೊಳಿಸಿರುವುದಾಗಿ ವರದಿಗಳಲ್ಲಿ ತಿಳಿಸ ಲಾಗಿದೆ. ಪಕ್ಷದ ಕ್ರಮಗಳು ಈ ರೀತಿಯಲ್ಲಿ ಮುಂದುವರಿ ಯುತ್ತಿರುವಾಗ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ವರ್ಕಾಡಿಯಲ್ಲಿ ಈಗ ಕಾಂಗ್ರೆಸ್‌ನ ಮುಖ್ಯ ಶತ್ರು ಯಾರೆಂದು ಅವರು ಪ್ರಶ್ನಿಸುತ್ತಿದ್ದಾರೆ. ನಾಳೆ ರಾಜ್ಯದಲ್ಲಿ ಕಾಂಗ್ರೆಸ್‌ನವರು ವಿರೋ ಧಿಸಬೇಕಾಗಿರುವುದು ಬಿಜೆಪಿಯನ್ನೋ, ಅಥವಾ ಸಿಪಿಎಂನ್ನೋ ಎಂಬ ಸಂಶಯವೂ ಹುಟ್ಟಿಕೊಂಡಿದೆ. ಇದೀಗಿನಂತೆ ಎರಡು ದೋಣಿಗಳಲ್ಲಿ ಕಾಲಿರಿಸಿ ಎಷ್ಟು ಕಾಲ ಮುಂದು ವರಿಯಬಹುದೆಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page