ವರ್ಕಾಡಿ: ಸಂಸ್ಮರಣೆ, ಇಫ್ತಾರ್ ಕೂಟ
ಮಂಜೇಶ್ವರ: ದಿ| ಶರೀಫ್ ಅರಿಬೈಲು ತೃತೀಯ ಸಂಸ್ಮರಣಾ ಕಾರ್ಯಕ್ರಮ ಹಾಗೂ ಇಫ್ತಾರ್ ಕೂಟ ವರ್ಕಾಡಿ ಬೇಕರಿ ಜಂಕ್ಷನ್ ಬಳಿಯ ಮುಹಿಯುದ್ದೀನ್ ಜುಮಾ ಮಸೀದಿ ಪರಿಸರದಲ್ಲಿ ನಡೆಯಿತು. ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿ ಅಧ್ಯಕ್ಷ ಜುನೈದ್ ಉರ್ಮಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಅಧ್ಯಕ್ಷತೆ ವಹಿಸಿದರು. ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ ಪ್ರಧಾನ ಭಾಷಣ ಮಾಡಿದರು. ಹರ್ಷಾದ್ ವರ್ಕಾಡಿ, ಎಸ್. ಅಬ್ದುಲ್ ಖಾದರ್ ಹಾಜಿ, ಮೊಹಮ್ಮದ್ ಬಿ.ಕೆ., ಸದಾಶಿವ ಪೊಯ್ಯತ್ತಬೈಲು, ಖಲೀಲ್ ಬಜಾವಲ್, ಮೊಹಮ್ಮದ್ ಹನೀಫ್ ಎಚ್.ಎ, ಅಸೀಸ್ ಕಲ್ಲೂರ್, ವಿಕ್ಟರ್ ವೇಗಸ್, ರಫೀಕ್ ಕುಂಟಾರು, ಅಹ್ಮದ್ ಮನ್ಸೂರ್ ಬಿ.ಎಂ, ಶೈಲೇಶ್ ಕೆ, ಇರ್ಷಾದ್ ಮಂಜೇಶ್ವರ, ಇಸ್ಮಾಯಿಲ್ ಉಪಸ್ಥಿತರಿದ್ದರು.