ವಾಣಿಯಗಾಣಿಗ ಸಭಾ ಕುಂಬಳೆ ಘಟಕ ಮಹಾಸಭೆ, ಕುಟುಂಬ ಸಂಗಮ
ಕುಂಬಳೆ: ವಾಣಿಯ ಗಾಣಿಗ ಸಭಾ ಕುಂಬಳೆ ಘಟಕದ ವಾರ್ಷಿಕ ಮಹಾಸಭೆ ಹಾಗೂ ಕುಟುಂಬ ಸಂಗಮ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣ ದಲ್ಲಿ ನಡೆಯಿತು. ಪೆರ್ಣೆ ಕ್ಷೇತ್ರದ ಮಜಲ್ ಕೋಮರ್ತಚ್ಚನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕೆ.ಸಿ. ಮೋಹನ ಕಳತ್ತೂರು ಅಧ್ಯಕ್ಷತೆ ವಹಿಸಿದರು. ಪೆರ್ಣೆ ಕ್ಷೇತ್ರದ ನಾಲ್ತಚ್ಚನ್ ಕೇಶವ ಕುಂಬಳೆ, ಪೆರ್ಣೆ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಜಯಂತ, ಜಿಲ್ಲಾ ವಾಣಿಯ ಗಾಣಿಗ ಸಭಾದ ಅಧ್ಯಕ್ಷ ಎಸ್.ಬಿ. ನಾರಾಯಣ, ಕಾರ್ಯದರ್ಶಿ ರತ್ನಾಕರ ಎಸ್. ಓಡಂಗಲ್ಲು, ಗೋಪಾಲ ಮಾಸ್ತರ್ ಪಂಜತ್ತೊಟ್ಟಿ, ಪದ್ಮಾವತಿ ಟೀಚರ್, ಅಪ್ಪಣ್ಣ ಮಾಸ್ತರ್ ನಾಯ್ಕಾಪು, ಕೊಡಿ ಅಪ್ಪು, ರಾಮ ಪೊಯ್ಯೆಕಂಡ, ಕೇಶವ ದೇವಿನಗರ ಮೊದಲಾದವರು ಶುಭ ಹಾರೈಸಿದರು. ಜಯರಾಮ ಮುಳಿಯಡ್ಕ ನಿರೂಪಿಸಿ, ಸೀತಾರಾಮ ಸ್ವಾಗತಿಸಿದರು. ಶಶಿ ನಾರಾಯಣಮಂಗಲ ವಂದಿಸಿದರು.
ನೂತನ ಕಾರ್ಯಕಾರಿ ಸಮಿತಿ ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಕೆ.ಸಿ. ಮೋಹನ ಕಳತ್ತೂರು, ಕಾರ್ಯ ದರ್ಶಿಯಾಗಿ ಸೀತಾರಾಮ ಬಿ. ನಾರಾಯಣಮಂಗಲ, ಕೋಶಾಧಿಕಾರಿ ಯಾಗಿ ನಾರಾಯಣ ಕುಂಟಂಗೇರಡ್ಕ, ಉಪಾಧ್ಯಕ್ಷರಾಗಿ ತೇರಪ್ಪ ಆರಿಕ್ಕಾಡಿ, ಮೋಹನ್‌ದಾಸ್ ನಾಯ್ಕಾಪು, ಉಪ ಕಾರ್ಯದರ್ಶಿಯಾಗಿ ಪ್ರೀನಾ ಟಿ.ಎ. ಹಾಗೂ ಹದಿನೆಂಟು ಮಂದಿಯನ್ನೊಳ ಗೊಂಡ ಕಾರ್ಯಕಾರಿ ಸಮಿತಿಯನ್ನು ರೂಪೀಕರಿಸಲಾಯಿತು. ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳು ಜರಗಿತು.