ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಸರಕಾರಿ ವಾಹನ ತುಕ್ಕುಹಿಡಿದು ನಾಶ

ಉಪ್ಪಳ: ಹೊಸಂಗಡಿ ಬಳಿಯ ವಾಮಂಜೂರ ಅಬಕಾರಿ ಚೆಕ್‌ಪೋಸ್ಟ್ ಬಳಿಯಲ್ಲಿ ಮಾರಾಟ ತೆರಿಗೆ ಇಲಾಖೆಯ  ಸರಕಾರಿ ವಾಹನವೊಂದು ತುಕ್ಕುಹಿಡಿದು ನಾಶವಾಗುತ್ತಿದೆ. ಇಲ್ಲಿನ ಅಬಕಾರಿ ಚೆಕ್‌ಪೋಸ್ಟ್ ಬಳಿಯಲ್ಲಿಯೇ ಈ ಹಿಂದೆ ಹಲವಾರು ವರ್ಷಗಳ ಕಾಲ ಮಾರಾಟ ತೆರಿಗೆ ಇಲಾಖೆ ಕಚೇರಿಯೂ ಕಾರ್ಯವೆಸಗುತ್ತಿತ್ತು. ಈ ಸಂದರ್ಭದಲ್ಲಿ ಈ ವಾಹನ ಹಾನಿಗೀಡಾದ ಸ್ಥಿತಿಯಲ್ಲಿ ಇತ್ತೆಂದು ಹೇಳಲಾಗುತ್ತಿದೆ. ಆದರೆ ಜಿಎಸ್‌ಟಿ ಆರಂಭವಾದ ಬಳಿಕ ಮಾರಾಟ ತೆರಿಗೆ ಚೆಕ್‌ಪೋಸ್ಟ್ ಸ್ಥಗಿತಗೊಳಿಸಲಾಗಿದ್ದರೂ ಈ ವಾಹನ ಮಾತ್ರ ಅಲ್ಲಿ  ಉಳಿದು ಕೊಂಡಿದೆ. ಈ ಕಟ್ಟಡದಲ್ಲಿ ಅಲ್ಪ ಕಾಲ ಮಾರಾಟ ತೆರಿಗೆಯ ಕೊಮ್ಮಂಡ್ ಸೆಂಟರ್ ಕಾರ್ಯಾ ಚರಿಸುತ್ತಿತ್ತು. ಆದರೆ ಅದೂ ಕೂಡಾ ಮುಚ್ಚಗಡೆಗೊಂ ಡಿರುವುದಾಗಿ ಹೇಳಲಾಗುತ್ತಿದೆ. ಲಕ್ಷಾಂತರ ರೂ. ಮೌಲ್ಯದ ವಾಹನ ತುಕ್ಕುಹಿಡಿದು ನಶಿಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page