ವಾಸು ಬಾಯಾರ್‌ಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಾಸರಗೋಡು:  ಹಿರಿಯ ರಂಗನಟ, ಯಕ್ಷಗಾನ ಕಲಾವಿದ, ಚಿತ್ರನಟ ವಾಸು ಬಾಯಾರ್ ಅವರ ಸಾಧನೆಗಳನ್ನು ಗುರುತಿಸಿ ಅವರಿಗೆ  ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ೨೦೨೩ ನೀಡಿ ಗೌರವಿಸಲಾ ಯಿತು. ಬಾಯಾರು ಪ್ರಶಾಂತಿ ವಿದ್ಯಾಕೇಂದ್ರ ದಲ್ಲಿ ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಯೋಜಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಸಾಧ್ವಿ ಶ್ರೀ ಮಾತಾನಂದಮಯಿ ಒಡಿಯೂರು ಹಾಗೂ ಮಾಜಿಕೇಂದ್ರ ಸಚಿವ, ಸಂಸದ ರಮೇಶ್ ಚಂದಪ್ಪ ಜಿಗಜಿಣಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು

ಗ.ಸಾ.ಸಾ ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಪನೆಯಾಲ ವೆಂಕಟ್ರಮಣ ಭಟ್, ಎ.ಆರ್. ಸುಬ್ಬಯ್ಯಕಟ್ಟೆ, ಝೆಡ್ ಎ ಕಯ್ಯಾರ್, ಅಖಿಲೇಶ್ ಮಗುಮುಗಂ, ಚಿನಿಯಪ್ಪ ನಾಯ್ಕ ಎನ್, ಗುಣಾಜೆ ರಾಮಚಂದ್ರ ಭಟ್, ವಾಮನ್‌ರಾವ್ ಬೇಕಲ, ಹಿರಣ್ಯ ಮಹಾಲಿಂಗ ಭಟ್, ಪೆಲತ್ತಡ್ಕ ರಾಮಕೃಷ್ಣ ಭಟ್, ವಾಸುದೇವ ಹೊಳ್ಳ, ಅರಿಬೈಲು ಗೋಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

RELATED NEWS

You cannot copy contents of this page