ಉಪ್ಪಳ: ಪೊಲೀಸರ ವಾಹನ ತಪಾಸಣೆ ವೇಳೆ ನಿಲ್ಲಿಸದೆ ಪರಾರಿ ಯಾದ ಆಟೋ ಚಾಲಕನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ ಎಸ್‌ಐ ಉಮೇಶ್ ನೇತೃತ್ವದಲ್ಲಿ ಕಜೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಆಟೋ ರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ರಿಕ್ಷಾ ನಿಲ್ಲಿಸದೆ ಪರಾರಿಯಾಗಿರುವುದಾಗಿ ದೂರಲಾಗಿದೆ.