ವಿದೇಶಿ ಕರೆನ್ಸಿ ಸೇರಿ ೧೫ ಲಕ್ಷ ರೂ. ವಶ: ಇಬ್ಬರು ಕಸ್ಟಡಿಗೆ

ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶಿ ಕರೆನ್ಸಿ ಸೇರಿದಂತೆ ಒಟ್ಟು ೧೫ ಲಕ್ಷ ರೂ. ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಕಾಸರಗೋಡು ಚೌಕಿ ನಿವಾಸಿ ಮೊಹಮ್ಮದ್ (೪೨) ಮತ್ತು ಮಲಪ್ಪುರಂ ತಿರೂರಂಬಾಡಿಯ ಝೈನುದ್ದೀನ್ (೫೦) ಎಂಬವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಶಪಡಿಸಲಾದ ಮಾಲಿನಲ್ಲಿ ಅಮೆರಿಕನ್ ಡಾಲರ್, ಸೌದಿ ರಿಯಾಲ್ ಮತ್ತು ಮಲೇಷ್ಯದ ರಿಂಗಿಟ್ ಕರೆನ್ಸಿ ನೋಟುಗಳು ಸೇರಿ ಒಟ್ಟು ಏಳೂವರೆ ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಮತ್ತು ಏಳೂವರೆ ಲಕ್ಷ ಭಾರತೀಯ ಕರೆನ್ಸಿ ಒಳಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕರೆನ್ಸಿ ನೋಟುಗಳನ್ನು ಬಳಿಕ ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿ ಕಸ್ಟಡಿಗೆ ತೆಗೆದುಕೊಂಡ ಇಬ್ಬರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡು ಬಳಿಕ ಅವರನ್ನು ಬಿಡುಗಡೆ ಗೊಳಿಸಿದ್ದಾರೆ. ಈ ಹಣಕ್ಕೆ ಸಂಬಂಧಿಸಿದ ಅಧಿಕೃತ  ದಾಖಲು ಪತ್ರಗಳನ್ನು ನ್ಯಾಯಾಲಯ ದಲ್ಲಿ ಹಾಜರುಪಡಿಸಿದ್ದಲ್ಲಿ ಅದು ಅದರ ಮಾಲಕರಿಗೆ ಹಿಂತಿರುಗಿ ಲಭಿಸಲಿದೆ. ಇಲ್ಲವಾ ದಲ್ಲಿ ಅದು ನೇರವಾಗಿ ಸರಕಾರಿ ಖಜಾನೆಗೆ ಹೋಗಿ ಸೇರಲಿದೆ. ಪರಸ್ಪರ ಹಸ್ತಾಂತರಿಸಲು ಈ ಹಣ ಕಾಸರಗೋಡಿಗೆ ತರಲಾಗಿತ್ತೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page