ವಿದ್ಯಾರ್ಥಿಗಳ ನಡುವೆ ಘರ್ಷಣೆ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು
ಕಲ್ಲಿಕೋಟೆ: ಕಲ್ಲಿಕೋಟೆ ತಾಮರಶ್ಶೇರಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಮಾರಾ ಮಾರಿ ನಡೆದು ಅದರಲ್ಲಿ ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಯ ತಲೆಗೆ ಗಂಭೀರ ಏಟು ಬಿದ್ದು ಬಳಿಕ ಚಿಕಿತ್ಸೆ ಮಧ್ಯೆ ಆತ ಸಾವನ್ನಪ್ಪಿದ ಘಟನೆ ನಡೆದಿದೆ.
ಎಳಚ್ಚಿಲ್ ಎಂ.ಜೆ. ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಶಹಬಾಸ್ (15) ಸಾವನ್ನಪ್ಪಿದ ವಿದ್ಯಾರ್ಥಿ. ತಲೆಗೆ ಗಂಭೀರ ಏಟು ಬಿದ್ದ ಆತನನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿ ತ್ತಾದರೂ ಅದು ಫಲಕಾರಿಯಾಗದೆ ಇಂದು ಮುಂಜಾನೆ ಆತ ಸಾವನ್ನಪ್ಪಿದ್ದಾನೆ.
ತಾಮರಶ್ಶೇರಿ ಚುಗಂ ಪಾಲೋರಕುನ್ನಿನ ಇಕ್ಭಾಲ್-ರಂಸೀನಾ ದಂಪತಿ ಪುತ್ರನಾಗಿದ್ದಾನೆ ಮೃತ ಬಾಲಕ. ಘಟನೆಗೆ ಸಂಬಂಧಿಸಿ ತಾಮರಶ್ಶೇರಿ ಜಿಎಎಚ್‌ಎಸ್‌ಎಸ್‌ನ ಐವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ರವಿವಾರ ತಾಮರಶ್ಶೇರಿ ವ್ಯಾಪಾರ ಭವನ ಬಳಿಯ ಟ್ಯೂಶನ್ ಸೆಂಟರ್‌ನಲ್ಲಿ ಟ್ಯೂಶನ್ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಆ ವೇಳೆ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ವಾಗ್ವಾದ ಉಂಟಾಗಿ ಬಳಿಕ ಅದು ಪರಸ್ಪರ ಘರ್ಷಣೆಗೂ ತಿರುಗಿತೆನ್ನಲಾ ಗಿದೆ. ಆಗ ಅಲ್ಲಿನ ಅಧ್ಯಾಪಕ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳನ್ನು ಶಾಂತಗೊಳಿಸಿದ್ದರು. ಅದರ ಮುಂದು ವರಿಕೆಯಾಗಿ ಗುರುವಾರ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಮಾರಾಮಾರಿ ನಡೆದು ಅದರಲ್ಲಿ ಶಹಬಾಸ್‌ನ ತಲೆಗೆ ಗಂಭೀರ ಏಟು ಬಿದ್ದಿತ್ತು.