ವಿದ್ಯಾರ್ಥಿನಿಯನ್ನು ಅಪಹರಿಸಿ ಬಾಯಿಗೆ ಬಟ್ಟೆ ತುರುಕಿಸಿ ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು
ಕಾಸರಗೋಡು: ಶಾಲೆಗೆ ಹೋಗುತ್ತಿದ್ದ 14ರ ಹರೆಯದ ವಿದ್ಯಾರ್ಥಿನಿಯನ್ನು ಅಪಹರಿಸಿ ಕೊಂಡು ಹೋಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀಡಲಾಗಿದೆ. ಇದರಂತೆ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಕಲ ಪೊಲೀಸ್ ಠಾಣೆ ಗೊಪಟ್ಟ ಪ್ರದೇಶವೊಂದರ ಈ ಬಾಲಕಿಯೋರ್ವೆ ಶಾಲೆಗೆ ಹೋಗುತ್ತಿದ್ದ ದಾರಿ ಮಧ್ಯೆ ಯುವ ಕನೋರ್ವ ಆಕೆಯನ್ನು ಅಪಹರಿಸಿ, ದಾರಿ ಪಕ್ಕದ ಹಳೇ ಕಟ್ಟಡವೊಂದಕ್ಕೆ ಕೊಂಡೊಯ್ದು ಆಕೆ ಧರಿಸಿದ ಶಾಲಿನಿಂದ ಆಕೆಯ ಬಾಯಿ ಬಿಗಿದು ಬಳಿಕ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. 11 ತಿಂಗಳ ಹಿಂದೆ ಈ ಘಟನೆ ನಡೆದಿದೆ. ಆದರೆ ಆ ಬಗ್ಗೆ ನಿನ್ನೆಯಷ್ಟೇ ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಆರೋಪಿಗಾಗಿರುವ ಶೋಧ ಆರಂಭಿಸಿದ್ದಾರೆ.
ಈ ಬಾಲಕಿಯನ್ನು ಪೊಲೀಸರು ವೈದ್ಯಕೀಯ ತಪಾಸಣೆಗೊಪಡಿಸಿದ್ದು, ಅದರಲ್ಲಿ ಆಕೆ ಲೈಂಗಿಕ ಕಿರುಕುಳಕ್ಕೊಳಗಾಗಿ ರುವುದು ಸಾಬೀತುಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.