ವಿದ್ಯಾರ್ಥಿನಿಯರಿಗೆ ಕಮೆಂಟ್ ಪ್ರಶ್ನಿಸಿದ ಎಸ್‌ಐಯ ಕುತ್ತಿಗೆ ಹಿಡಿದು ದೂಡಿದ ವಿದ್ಯಾರ್ಥಿ
ಪತ್ತನಂತಿಟ್ಟ: ಬಸ್ ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರ ಬಗ್ಗೆ ಕಮೆಂಟ್ ಹೇಳಿದುದನ್ನು ಪ್ರಶ್ನಿಸಿದ ಎಸ್‌ಐಗೆ ಪ್ಲಸ್ ಟು ವಿದ್ಯಾರ್ಥಿ ಹಲ್ಲೆಗೈದಿದ್ದಾನೆ. ಪತ್ತನಂತಿಟ್ಟ ಪೊಲೀಸ್ ಠಾಣೆಯ ಎಸ್‌ಐ ಜಿನು ಆಕ್ರಮಣಕ್ಕೆ ತುತ್ತಾಗಿದ್ದಾರೆ. ಇವರನ್ನು ಅಲ್ಲಿನ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ನಿನ್ನೆ ಸಂಜೆ ಪತ್ತನಂತಿಟ್ಟ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿನಿಯರ ವಿರುದ್ಧ ಕಮೆಂಟ್ ಹೇಳುತ್ತಿದ್ದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ಜಿನು ಹಾಗೂ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ತಿರುಗಾಡುತ್ತಿದ್ದ ವಿದ್ಯಾರ್ಥಿಯಲ್ಲಿ ಮನೆಗೆ ತೆರಳಲು ಎಸ್‌ಐ ಆಗ್ರಹಿಸಿದ್ದಾರೆ. ಈ ವೇಳೆ ‘ಮನೆಗೆ ಹೋಗಲು ಹೇಳಲು ನೀನ್ಯಾರೆಂದು’ ಪ್ರಶ್ನಿಸಿದ ವಿದ್ಯಾರ್ಥಿ ಯನ್ನು ಹಾಗಿದ್ದರೆ ‘ಠಾಣೆಗೆ ಬಾ’ ಎಂದು ಎಸ್‌ಐ ಕೈ ಹಿಡಿದು ಜೀಪಿಗೆ ಹತ್ತಿಸುವ ವೇಳೆ ಎಸ್‌ಐಯನ್ನು ಆತ ಆಕ್ರಮಿಸಿ ದ್ದಾನೆ. ಎಸ್‌ಐಯ ಕುತ್ತಿಗೆ ಹಿಡಿದು ದೂಡಿದ ಬಳಿಕ ತಲೆಯನ್ನು ಹಿಡಿದು ನೆಲಕ್ಕೆ ಗುದ್ದಿರುವುದಾಗಿಯೂ ಹೇಳಲಾ ಗಿದೆ. ಎಸ್‌ಐ ಹಾಗೂ ಜೊತೆಗಿದ್ದ ಪೊಲೀಸರು ಸೇರಿ ವಿದ್ಯಾರ್ಥಿಯನ್ನು ಸೆರೆ ಹಿಡಿದು ಠಾಣೆಗೆ ಕೊಂಡುಹೋಗಿದ್ದಾರೆ. ಲಾಕಪ್‌ನಲ್ಲೂ ಈತ ಬೊಬ್ಬೆ ಹೊಡೆಯು ತ್ತಿದ್ದು, ಮಾನಸಿಕ ಅಸ್ವಸ್ಥತೆ ಎದುರಿಸುತ್ತಿ ರುವ ವಿದ್ಯಾರ್ಥಿ ಎಂದು ಶಂಕಿಸಲಾಗಿದೆ.