ವಿದ್ಯುತ್ ಬಿಲ್ ಇನ್ನು ಕನ್ನಡದಲ್ಲೂ

ಕಾಸರಗೋಡು: ಮಂಜೇಶ್ವರ, ಕಾಸರಗೋಡು ಮಂಡಲಗಳ ಕೆಎಸ್‌ಇಬಿ ಬಿಲ್‌ಗಳಲ್ಲಿ ಕನ್ನಡ  ಭಾಷೆಯನ್ನು ಕೂಡಾ ಸೇರಿಸಲು ಕ್ರಮ ಕೈಗೊಂಡಿರುವುದಾಗಿ ವಿದ್ಯುತ್ ಇಲಾಖೆ ಸಚಿವ ಕೆ. ಕೃಷ್ಣನ್ ಕುಟ್ಟಿ ವಿಧಾನಸಭೆಯಲ್ಲಿ ತಿಳಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸಚಿವರು ಈ ವಿಷಯ ತಿಳಿಸಿದ್ದಾರೆ. ಈ ಮಂಡಲಗಳಲ್ಲಿ ಕನ್ನಡ ಭಾಷೆ ಮಾತ್ರ ತಿಳಿದಿರುವವರು ಇರುವುದರಿಂದಾಗಿ ಈ ರೀತಿ ಮಾq ಲಾಗಿದೆ. ಪ್ರಸ್ತುತ ವಿದ್ಯುತ್ ಬಿಲ್‌ಗಳು ಗ್ರಾಹಕರ ಅಗತ್ಯಾನುಸಾರ ಇಂಗ್ಲಿಷ್, ಮಲೆಯಾಳ ಭಾಷೆಗಳಲ್ಲೂ ಎಚ್‌ಟಿ, ಇಎಚ್‌ಟಿ ಗ್ರಾಹಕರಿಗೆ ಇಂಗ್ಲಿಷ್‌ನಲ್ಲೂ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page