ವಿಧಾನಸಭೆಯಲ್ಲಿ ಬೆಲೆ ಏರಿಕೆಯ ಸದ್ದು
ತಿರುವನಂತಪುರ: ಅವಶ್ಯಕ ಸಾಮಗ್ರಿಗಳ ಬೆಲೆ ಏರಿಕೆ ವಿಷಯ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಇಂದು ಭಾರೀ ಸದ್ದುಗದ್ದಲ ಸೃಷ್ಟಿಸಿತು. ಬೆಲೆಯೇರಿಕೆ ಬಗ್ಗೆ ವಿರೋಧ ಪಕ್ಷಗಳು ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ತುರ್ತು ಗೊತ್ತುವಳಿ ಮಂಡಿಸಿ, ಆ ಬಗ್ಗೆ ಚರ್ಚೆ ನಡೆಸಬೇಕೆಂದು ಆಗ್ರ ಹಿಸಿದರು. ಆದರೆ ಆ ಗೊತ್ತುವಳಿಯನ್ನು ವಿಧಾನಸಭಾ ಅಧ್ಯಕ್ಷರು ತಿರಸ್ಕರಿಸಿದಾಗ ಅದರಿಂದ ಕುಪಿತರಾದ ವಿಪಕ್ಷಿ ಯರು ಸದನದಲ್ಲಿ ಭಾರೀ ಸದ್ದುಗದ್ದಲ ಸೃಷ್ಟಿಸಿ ಪ್ರತಿಭಟನಾ ಸೂಚಕವಾಗಿ ವಿಧಾನಸಭೆಯಿಂದ ಸಭಾತ್ಯಾಗ ನಡೆಸಿದರು.