ವಿಮಾನದಲ್ಲಿ ನಟಿಯೊಂದಿಗೆ ಅನುಚಿತ ವರ್ತನೆ-ದೂರು

ಕೊಚ್ಚಿ: ವಿಮಾನದಲ್ಲಿ  ಸಿನಿಮಾ ನಟಿಯೊಂದಿಗೆ ಸಹಪ್ರಯಾಣಿಕ ನೋರ್ವ ಅನುಚಿತವಾಗಿ ವರ್ತಿಸಿದ ಬಗ್ಗೆ ದೂರುಂಟಾಗಿದೆ. ತೃಶೂರು ನಿವಾಸಿಯಾದ ನಟಿ ಈ ಬಗ್ಗೆ ನೆಡುಂಬಾಶ್ಶೇರಿ ಪೊಲೀಸ್ ಠಾಣೆಯ ಲ್ಲಿ ದೂರು ನೀಡಿದ್ದಾರೆ.  ಏರ್ ಇಂಡಿಯಾದ ಮುಂಬಯಿ-ಕೊಚ್ಚಿ ವಿಮಾನದಲ್ಲಿ ನಟಿಗೆ ಸಹಪ್ರಯಾಣಿ ಕನಿಂದ ಕೆಟ್ಟ ಅನುಭವವುಂಟಾಗಿರು ವುದಾಗಿ ದೂರಲಾಗಿದೆ. ವ್ಯಕ್ತಿಯಿಂದ ಕೆಟ್ಟ ವರ್ತನೆ ಉಂಟಾದುದರಿಂದ ನಟಿ ಸೀಟ್ ಬದಲಾಯಿಸಿದ್ದಾರೆ. ಮೊದಲು ಇ ಮೈಲ್ ಮೂಲಕ ನೆಡುಂಬಾಶ್ಶೇರಿ ಪೊಲೀಸರಿಗೆ ನಟಿ ದೂರು ನೀಡಿದ್ದಾರೆ. ಆದರೆ ನೇರವಾಗಿ ಹಾಜರಾಗಿ ದೂರು ನೀಡುವಂತೆ ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ಬಳಿಕ ಠಾಣೆಗೆ ತಲುಪಿ ದೂರು ನೀಡಲಾಗಿದೆ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page