ವಿಮಾನ ನಿಲ್ದಾಣ ಮೂಲಕ ಚಿನ್ನ ಸಾಗಾಟ: ನಾಲ್ಕು ವರ್ಷಗಳಲ್ಲಿ ಕೇರಳ ದಲ್ಲಿ ವಶಪಡಿಸಿದ್ದು ೨೨೯೧ ಕಿಲೋ ಚಿನ್ನ

ತಿರುವನಂತಪುರ: ಕೇರಳದ ವಿಮಾನ ನಿಲ್ದಾಣಗಳ ಮೂಲಕ ಅನಧಿಕೃತವಾಗಿ ವ್ಯಾಪಕ ಚಿನ್ನ  ಸಾಗಾಟ ನಡೆಯುತ್ತಿದೆಯೆಂದು ಮೂಲಗಳಿಂದ ತಿಳಿದುಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ವಿಮಾನ ನಿಲ್ದಾಣಗಳಿಂದಾಗಿ  ೨೨೯೧.೫೧ ಕಿಲೋ ಚಿನ್ನವನ್ನು ವಶಪಡಿಸಲಾಗಿದೆ.  ಚಿನ್ನ ಸಾಗಾಟ ಹಾಗೂ ಅದನ್ನು ವಶಪಡಿಸಿಕೊ ಳ್ಳುವಲ್ಲಿ ದೇಶದಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಆದರೆ ಕಳೆದ ವರ್ಷ ಮಾತ್ರ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಚಿನ್ನ ವಶಪಡಿಸಲಾಗಿದೆ.

೨೦೨೩ ಅಕ್ಟೋಬರ್ ವರೆಗಿನ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ ೫೪೨.೩೬ ಕಿಲೋ ಚಿನ್ನವನ್ನು ವಶಪಡಿಸಲಾಗಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ೯೯೭.೫೧ ಕಿಲೋ ವಶಪಡಿಸಲಾಗಿದೆ. ೨೦೨೦,೨೧, ೨೨ನೇ ವರ್ಷಗಳಲ್ಲಿ ಕೇರಳದಲ್ಲಿ ಯಥಾಕ್ರಮ ೪೦೬.೩೯ ಕಿಲೋ, ೫೮೬.೯೫ ಕಿಲೋ, ೭೫೫.೮೧ ಕಿಲೋ ಚಿನ್ನವಶಪಡಿಸಲಾ ಗಿದೆ.  ಇದೇ ವೇಳೆ ಮಹಾಪಾಷ್ಟ್ರದಲ್ಲಿ ಈ ಮೂರು ವರ್ಷಗಳಲ್ಲಿ ಯಥಾಕ್ರಮ ೧೯೧.೪೩ ಕಿಲೋ, ೧೧೯.೨೨ ಕಿಲೋ, ೫೩೫. ೬೫ ಕಿಲೋ ಚಿನ್ನವನ್ನು ವಶಪಡಿ ಸಲಾಗಿಯೆಂದು ಲೆಕ್ಕಾಚಾರಗಳು ತಿಳಿಸುತ್ತಿವೆ.

Leave a Reply

Your email address will not be published. Required fields are marked *

You cannot copy content of this page