ವಿವಿಧೆಡೆಗಳಿಗೆ ಅಬಕಾರಿ ದಾಳಿ: ಮದ್ಯ, ವಾಶ್ ಪತ್ತೆ; ರಿಕ್ಷಾ ಸಹಿತ ಓರ್ವ ಸೆರೆ
ಕಾಸರಗೋಡು: ಅಬಕಾರಿ ತಂಡ ನಿನ್ನೆ ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ ಮಾದಕದ್ರವ್ಯ ಹಾಗೂ ವಾಶ್ (ಹುಳಿರಸ) ವಶಪಡಿಸಿಕೊಂಡಿದೆ. ಈ ಸಂಬAಧ ಓರ್ವನನ್ನು ಬಂಧಿಸಿ ಆಟೋ ರಿಕ್ಷಾವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮುಳಿಯಾರು ಶಿವಪುರಂನಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಕೆ.ವಿ. ಮುರಳಿಯವರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 180 ಎಂ.ಎಲ್ನ 96 ಟೆಟ್ರಾ ಪ್ಯಾಕೆಟ್ (17.280 ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಆಟೋರಿಕ್ಷಾ ಸಹಿತ ಮೊಹಮ್ಮದ್ ಶಾಫಿ (44) ಎಂಬಾತನನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ (ಗ್ರೇಡ್) ನೌಶಾದ್ ಕೆ, ಅಜೀಶ್, ಸಿಇಒಗಳಾದ ಸತೀಶನ್ ಮತ್ತು ಮಂಜುನಾಥನ್ ಎಂಬವರು ಒಳಗೊಂಡಿದ್ದರು.
ಇದೇ ರೀತಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ಸುಜಿತ್ ಪಿ.ಎಸ್.ರ ನೇತೃತ್ವದ ತಂಡ ಚೆಂಗಳ ಗ್ರಾಮದ ಬಿ.ಸಿ.ರೋಡ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯವಾದ 0.2 ಗ್ರಾಂ ಮೆಥಾಂಫಿಟ್ಟಾಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಅಬ್ದುಲ್ ಖಾದರ್ ಬಿ.ಎಂ. (27) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ಗಳಾದ ಸಿ.ಕೆ.ವಿ. ಸುರೇಶ್, ನೌಶಾದ್ ಕೆ (ಗ್ರೇಡ್), ಅಜೀಶ್ ಸಿ, ಸಿಇಒಗಳಾದ ಮಂಜುನಾಥನ್ ವಿ, ಸೋನು ಸೆಬಾಸ್ಟಿಯನ್ ಮತ್ತು ಚಾಲಕ ಸಜೀಶ್ ಎಂಬವರು ಒಳಗೊಂಡಿದ್ದರು.
ಇನ್ನೊAದೆಡೆ ವೆಳ್ಳರಿಕುಂಡ್ ಪಾಲಾವಯಲ್ನಲ್ಲಿ ನೀಲೇಶ್ವರ ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ವೈಶಾಖ್ ಎನ್.ರ ನೇತೃತ್ವದ ತಂಡ ಮೀನಾಂಚೇರಿ ಎಡಯಾನ್ ಕಾಟಿಲ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ತಲಾ 60 ಲೀಟರ್ನ 4 ಬ್ಯಾರೆಲ್ ಹಾಗೂ 20 ಲೀಟರ್ನ ಬ್ಯಾರೆಲ್ನಲ್ಲಿ ತುಂಬಿಸಿಡಲಾಗಿದ್ದ ಒಟ್ಟು 260 ಲೀಟರ್ ವಾಶ್ (ಹುಳಿರಸ) ಪತ್ತೆಹಚ್ಚಿ ವಶಪಡಿಸಿದೆ.
ಆದರೆ ಈ ಸಂಬAಧ ಯಾರನ್ನೂ ಬಂಧಿಸಲಾಗಿಲ್ಲ. ಈ ಕಾರ್ಯಾ ಚರಣೆಯಲ್ಲಿ ಪ್ರಿವೆಂಟೀವ್ ಆಫೀಸರ್ಗಳಾದ ರಾಜನ್ ಪಿ, ಪ್ರಜಿತ್ ಕುಮಾರ್ ಕೆ.ವಿ (ಗ್ರೇಡ್), ಸಿಇಒಗಳಾದ ಸುಧೀರ್ ಪಾರಮ್ಮಲ್ ಮತ್ತು ರಾಜೀವನ್ (ಚಾಲಕ) ಎಂಬವರು ಒಳಗೊಂಡಿದ್ದರು.