ವಿವಿಧ ಕಡೆಗಳಲ್ಲಿ ತ್ಯಾಜ್ಯ ರಾಶಿ : ದುರ್ವಾಸನೆಯಿಂದ ಸ್ಥಳೀಯರಿಗೆ ಸಮಸ್ಯೆ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳ ಒಳರಸ್ತೆಗಳಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದ್ದು, ದುರ್ವಾಸನೆ ಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಇದನ್ನು ತೆರವುಗೊಳಿಸಿ ಶುಚಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಳೆಗಾಲದ ಪೂರ್ವಭಾವಿ ಶುಚೀಕರಣ ಕೆಲವು ವಾರ್ಡ್ಗಳಲ್ಲಿ ಆರಂಭಗೊಂ ಡಿದ್ದರೂ ಮಣ್ಣಂಗುಳಿ ಮೈದಾನ ಪರಿಸರದ ರಸ್ತೆಗಳಲ್ಲಿ, ನಯಾ ಬಜಾರ್, ಸೋಂಕಾಲು ರಸ್ತೆಗಳಲ್ಲಿ ಮಳೆಗೆ ಕೊಳೆತ ತ್ಯಾಜ್ಯರಾಶಿ ಕಂಡುಬರುತ್ತಿದೆ. ಇದರಿಂದ ಈ ಪರಿಸರದಲ್ಲಿ ಮೂಗುಮುಚ್ಚಿ ಸಂಚರಿಸಬೇಕಾದ ದುಸ್ಥಿತಿಯಿದ್ದು, ರೋಗ ಹರಡಲು ಸಾಧ್ಯತೆಯಿ ದೆಯೆಂಬ ಭೀತಿಯಿದೆ. ಮಣ್ಣಂ ಗುಳಿ ಪರಿಸರ ರಸ್ತೆಗಳಲ್ಲಿದ್ದ ತ್ಯಾಜ್ಯ ರಾಶಿಯನ್ನು ಸ್ಥಳೀಯ ವ್ಯಾಪಾರಿ ಗಳು ಹಾಗೂ ವಾರ್ಡ್ ಪ್ರತಿ ನಿಧಿಯ ನೇತೃತ್ವದಲ್ಲಿ ಶುಚೀಕರಿಸಿ ದರೂ ರಾತ್ರಿ ಹೊತ್ತು ಇಲ್ಲಿ ತಂದು ತ್ಯಾಜ್ಯ ಉಪೇಕ್ಷಿಸುತ್ತಿರುವುದು ಸಮಸ್ಯೆಯಾಗಿದೆ. ಅಂಗನವಾಡಿ, ಶಾಲೆ, ಹಲವಾರು ಮನೆಗಳು ಹಾಗೂ ವ್ಯಾಪಾರ ಸಂಸ್ಥೆಗಳು ಇಲ್ಲಿದ್ದು, ಇವರಿಗೆ ತ್ಯಾಜ್ಯದಿಂದ ಸಮಸ್ಯೆ ಉಂಟಾಗಿದೆ. ಕೂಡಲೇ ಶುಚೀಕರಿಸಬೇಕೆಂದು ಆಗ್ರಹಿಸಿದ್ದಾರೆ.