ವಿವಿಧ ಬೇಡಿಕೆಗಳೊಂದಿಗೆ ಕೇರಳ ಪ್ರಾಂತ್ಯ ಪೆನ್ಶನರ್ಸ್ ಸಂಘದ ಧರಣಿ

ಕುಂಬಳೆ: ಕೇರಳ ಪ್ರಾಂತ್ಯ ಪೆನ್ಶ ನರ್ಸ್ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಸಬ್ ಟ್ರಶರಿ ಯ ಮುಂಭಾಗದಲ್ಲಿ ವಿವಿಧ ಬೇಡಿP ೆಗಳನ್ನು ಮುಂದಿರಿಸಿ ಧರಣಿ ನಡೆಸಲಾ ಯಿತು. ಪ್ರಾಂತ ಉಪಾಧ್ಯಕ್ಷ ಈಶ್ವರ ರಾವ್ ಉದ್ಘಾಟಿಸಿದರು. ಪಿಂಚಣಿದಾ ರರಿಗೆ ಕಳೆದ ೨೦೧೯ರಿಂದ ಸಿಗಬೇಕಾ ಗಿದ್ದ ಬಾಕಿಯಾಗಿರುವ ಎರಡು ಕಂತು ಪಿಂಚಣಿ ಮತ್ತು ಮೂರು ವರ್ಷ ಗಳಿಂದ ಕೊಡಬೇಕಾಗಿದ್ದ ಒಟ್ಟು ಆರು ಕಂತು ತುಟ್ಟಿಭತ್ಯೆ ಅನುಕೂಲತೆಗಳನ್ನು ಕೂಡಲೇ ನೀಡುವಂತೆ ಸರಕಾರವನ್ನು ಒತ್ತಾಯಿಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಮುತ್ತುಕೃಷ್ಣನ್ ಅವರು ಮೆಡಿ ಸೆಪ್‌ನ ನ್ಯೂನತೆಗಳಿಂದ ಪಿಂಚಣಿ ದಾರರು ಅನುಭವಿಸುವ ಸಂಕಷ್ಟಗ ಳನ್ನು ಸರಿಪಡಿಸಬೇಕೆಂದು ತಿಳಿಸಿದರು. ಪಿಂಚಣಿ ಸಂಘದ ಜಿಲ್ಲಾ ಕಾರ್ಯ ದರ್ಶಿ ನಾಗರಾಜ ಬಾಳಿಕೆ ಕಳೆದ ನಾಲ್ಕು ವರ್ಷಗಳಿಂದ ಇಂದಿನವರೆಗೆ ೮೦೦೦೦ದಷ್ಟು ಪಿಂಚಣಿದಾರರು ಸರಕಾರದ ಧೋರಣೆಯಿಂದ ಪಿಂಚಣಿ ಸವಲತ್ತುಗಳನ್ನು ಪಡೆಯದೆ ಮರಣಪಟ್ಟಿರುವರೆಂದೂ, ಮೆಡಿಸೆಪ್ ಎಂಬುದು ಪಿಂಚಣಿದಾರರನ್ನು ವಂಚಿಸುವ ಆರೋಗ್ಯ ಇನ್ಸೂರೆನ್ಸ್ ಆಗಿರುವುದರಿಂದ ಇದನ್ನು ಸರಕಾರ ನಿಲ್ಲಿಸಬೇಕೆಂದು ಹೇಳಿದರು. ಕೇಶವ ಭಟ್, ನಾರಾಯಣ ಭಟ್ ತಲೆಂಗಳ ಮಾತಾಡಿದರು. ನಾಗರಾಜ ಬಾಳಿಕೆ ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ಶ್ರೀಧರ ರಾವ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page