ವಿವಿಧ ಬೇಡಿಕೆ: ಎ.ಐ.ವೈ.ಎಫ್‌ನಿಂದ ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್

ಮಂಜೇಶ್ವರ: ಪ್ಯಾಸೆಂಜರ್ ರೈಲುಗಳ ಬೋಗಿಗಳನ್ನು ಹೆಚ್ಚಳಗೊಳಿಸಿ, ವಂದೇ ಭಾರತ್ ರೈಲನ್ನು ಮಂಗಳೂರು ತನಕ ವಿಸ್ತರಿಸಿ ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಎ.ಐ.ವೈ.ಎಫ್ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ರೈಲು ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್ ನಡೆಯಿತು. ಎ.ಐ.ವೈಎಫ್ ಮಂಜೇಶ್ವರ ಮಂಡಲ ಅಧ್ಯಕ್ಷ ಶರತ್ ಬೆಜ್ಜ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ. ಶ್ರೀಜಿತ್ ಮಾರ್ಚ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್, ರಾಜ್ಯ ಸಮಿತಿ ಸದಸ್ಯ ಧನೀಶ್ ಬಿರಿಕುಳಂ, ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕೆ.ಆರ್, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ, ಎ.ಐ.ವೈ.ಎಫ್ ನೇತಾರೆ ಅಮ್ಮು ಜನಾರ್ಧನನ್ ಮಾತನಾಡಿದರು. ದಯಾಕರ ಮಾಡ ಸ್ವಾಗತಿಸಿ, ಸುನೀತಾ ವಲ್ಟಿ ಡಿ.ಸೋಜ ವಂದಿಸಿದರು.

RELATED NEWS

You cannot copy contents of this page