ವಿಷ ಸೇವಿಸಿ ವಿದ್ಯಾರ್ಥಿನಿ ಸಾವಿಗೀಡಾದ ಪ್ರಕರಣ : ಇನ್ನೋರ್ವ ಆರೋಪಿ ಬಂಧನ

ಬದಿಯಡ್ಕ: ಶಾಲಾ ವಿದ್ಯಾ ರ್ಥಿನಿ ಇಲಿ ವಿಷ ಸೇವಿಸಿ ಸಾವಿಗೀ ಡಾದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿ ಸೆರೆಗೀಡಾಗಿ ದ್ದಾನೆ. ಇತ್ತೀಚೆಗೆ ಸೆರೆಗೀಡಾದ ಮೊಗ್ರಾಲ್ ಪುತ್ತೂರು ಕೋಟಕುನ್ನುವಿನ ಅನ್ವರ್ (೨೪) ಎಂಬಾತನ ಸ್ನೇಹಿತ ಸಾಹಿಲ್ (೨೧)  ಎಂಬಾತ ಸೆರೆಗೀಡಾದ   ಆರೋಪಿಯಾಗಿದ್ದಾನೆ. 

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ  ಹತ್ತನೇ ತರಗತಿ ವಿದ್ಯಾರ್ಥಿನಿಯೂ, ಕುಂಬ್ಡಾಜೆ ನಿವಾಸಿಯಾದ ಹದಿನಾರರ ಹರೆಯದ ಬಾಲಕಿಯ ಸಾವಿಗೆ ಸಂಬಂಧಿಸಿ ಈ ಇಬ್ಬರನ್ನು ಬಂಧಿಸಲಾಗಿದೆ.  ಕಳೆದ ಮಂಗಳವಾರ ಸಂಜೆ ಮನೆಯೊಳಗೆ ವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಳು. ಬಾಲಕಿಯನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನಿನ್ನೆ ಮುಂಜಾನೆ ಮೃತಪಟ್ಟಿದ್ದಾಳೆ.

ಬಾಲಕಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ  ಬದಿಯಡ್ಕ ಪೊಲೀಸರು ಹಾಗೂ ಮೆಜಿಸ್ಟ್ರೇಟ್ ಬಾಲಕಿ ಯಿಂದ ಹೇಳಿಕೆ ದಾಖಲಿಸಿ ಕೊಂಡಿದ್ದರು. ಆರೋಪಿಗಳಿಂದ ನಿರಂತರ ಉಂಟಾದ ಉಪಟಳ ಹಾಗೂ ಬೆದರಿಕೆಯನ್ನು ಸಹಿಸಲಾಗದೆ ವಿಷ ಸೇವಿಸಿರುವುದಾಗಿ ಬಾಲಕಿ ಹೇಳಿದ್ದಳು. ಇದರಂತೆ   ಪೋಕ್ಸೋ  ಕೇಸು ದಾಖಲಿಸಿಕೊಂಡ ಈ ಇಬ್ಬರನ್ನು ಬಂಧಿಸಿದ್ದಾರೆ.

ಇದೇ ವೇಳೆ ಬಾಲಕಿಯನ್ನು ಆರೋಪಿಗಳು ಮಂಗಳೂರು ಸಹಿತ ವಿವಿಧ ಸ್ಥಳಗಳಿಗೆ ಕರೆದೊಯ್ದು ಹಾಗೂ ಕಾರಿನೊಳಗೆ ಕಿರುಕುಳ ನೀಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕಿರುಕುಳ ಸಂದರ್ಭದಲ್ಲಿ ಕಾರು ಚಲಾಯಿಸಿದುದು ಸಾಹಿಲ್ ಆಗಿದ್ದಾನೆಂದೂ ತಿಳಿದುಬಂದಿದೆ.

ಬಾಲಕಿಯನ್ನು ಆರೋಪಿ ಅನ್ವರ್ ಸಾಮಾಜಿಕ ತಾಣದ ಮೂಲಕ ಪರಿಚಯಗೊಂಡಿದ್ದಾ ನೆನ್ನಲಾಗಿದೆ.  ಬಳಿಕ ವಿವಿಧೆಡೆಗೆ ಕರೆದೊಯ್ದು ಕಿರುಕುಳ ನೀಡಿದ್ದು, ಈ ವಿಷಯ ಬಹಿರಂಗಪಡಿಸಿದರೆ ತಂದೆಯನ್ನು ಕೊಲ್ಲುವುದಾಗಿ ನೇರವಾಗಿಯೂ ಫೋನ್ ಮೂಲಕವೂ  ಆರೋಪಿಗಳು   ಬೆದರಿಕೆಯೊಡ್ಡಿರುವುದಾಗಿಯೂ ಬಾಲಕಿ ಪೊಲೀಸರಲ್ಲಿ ತಿಳಿಸಿದ್ದಾಳೆನ್ನಲಾಗಿದೆ. ಇದರಂತೆ  ಪೋಕ್ಸೋ ಕಾಯ್ದೆ  ಹಾಗೂ ಆತ್ಮಹತ್ಯೆ ಪ್ರೇರಣೆ ಆರೋಪದಂತೆ ಆರೋಪಿಗಳ ವಿದರುದ್ಧ ಕೇಸು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page