ವ್ಯಕ್ತಿಯನ್ನು ಹನಿಟ್ರಾಪ್‌ನಲ್ಲಿ ಸಿಲುಕಿಸಿ ೫ ಲಕ್ಷ ರೂ. ಲಪಟಾವಣೆ: ಯುವತಿ ಸಹಿತ ೭ ಮಂದಿ ಸೆರೆ
ಕಾಸರಗೋಡು: ಮಾಂಙಾಡ್ ನಿವಾಸಿಯನ್ನು ಹನಿ ಟ್ರಾಪ್‌ನಲ್ಲಿ ಸಿಲುಕಿಸಿ ೫ ಲಕ್ಷ ರೂಪಾಯಿ ಲಪಟಾಯಿಸಲಾಯಿ ತೆಂಬ ಪ್ರಕರಣದಲ್ಲಿ ಯುವತಿ ಸಹಿತ ೭ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲಿಕೋಟೆ ಪೆರುಮಣ್ಣ ನಿವಾಸಿ ಪಿ. ಫೈಸಲ್ (೩೭), ಪತ್ನಿ ಕುಟ್ಟಿಕ್ಕಾ ಟೂರ್ ನಿವಾಸಿ ಎಂ.ಪಿ. ಲುಬ್ನಾ (೨೯), ಕಾಸರಗೋಡು ಶಿರಿಬಾ ಗಿಲು ನಿವಾಸಿ ಎನ್. ಸಿದ್ದಿಕ್ (೪೮), ಮಾಂಙಾಡ್‌ನ ದಿಲ್ಶಾದ್ (೪೦),ಮುಟ್ಟತ್ತೋಡಿಯ ನಫೀಸತ್ ಮಿಸ್ರಿಯ (೪೦), ಮಾಂಙಾಡ್‌ನ ಅಬ್ದುಲ್ಲ ಕುಂಞಿ (೩೨), ಪಡನ್ನಕ್ಕಾಡ್‌ನ ರಫೀಕ್ (೪೨) ಎಂಬಿವರನ್ನು ಮೇಲ್ಪರಂಬ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಮೋಹನ್ ಹಾಗೂ ತಂಡ ಸೆರೆ ಹಿಡಿದಿದ್ದಾರೆ. ಮಾಂಙಾಡ್ ತಾಮರಕ್ಕುಳಿ ನಿವಾಸಿಯಾದ ೫೯ರ ಹರೆಯದ ವ್ಯಕ್ತಿಯನ್ನು ಆರೋಪಿ ಗಳು ಹನಿಟ್ರಾಪ್‌ನಲ್ಲಿ ಸಿಲುಕಿಸಿ ಹಣ ಲಪಟಾಯಿಸಿದ್ದಾರೆ. ಲುಬ್ನಾ ದೂರು ಗಾರರನ್ನು ಮೊದಲು ಪರಿಚಯಗೊಂ ಡಿದ್ದಳು. ತನ್ನ ಕೈಯಲ್ಲಿರುವ ಕಂಪ್ಯೂಟರ್ ಹಾನಿಗೀಡಾಗಿದೆಯೆಂದು ಅದನ್ನು ದುರಸ್ತಿಗೊಳಿಸಲು ಸಹಾಯಮಾಡ ಬೇಕೆಂದೂ, ನಿಮ್ಮ ಕ್ಷೇಮ ಚಟುವಟಿ ಕೆಗಳ ಕುರಿತು ತಾನು ತಿಳಿದಿದ್ದೇನೆಂದು ಲುಬ್ನಾ ದೂರುದಾರರೊಂದಿಗೆ ತಿಳಿಸಿದ್ದಾಳೆ. ಇದರಂತೆ ಯುವತಿ ಯನ್ನು ಸೇರಿಸಿಕೊಂಡು ಕಾಸರ ಗೋಡಿಗೆ ತೆರಳಿದ ದೂರುಗಾರ ಒಂದು ಅಂಗಡಿಗೆ ತಲುಪಿದ್ದಾರೆ. ಆದರೆ ಕಂಪ್ಯೂಟರನ್ನು ದುರಸ್ತಿಗೊಳಿ ಸಲು ಸಾಧ್ಯವಿಲ್ಲವೆಂದು ತಿಳಿಸಿದು ದರಿಂದ ಹೊಸ ಕಂಪ್ಯೂಟರ್ ಖರೀದಿಸಿ ನೀಡುವುದಾಗಿ ಅವರು ಭರವಸೆ ನೀಡಿದಾರೆ. ಅನಂತರ ಈ ತಿಂಗಳ ೨೫ರಂದು ದೂರುಗಾರನನ್ನು ಸೇರಿಸಿಕೊಂಡು ಮಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿ ನ ಹೋಟೆಲ್ ಕೊಠಡಿಯಲ್ಲಿ ತನ್ನ ನಗ್ನಚಿತ್ರವನ್ನು ಯುವತಿ ತೆಗೆದಿರುವು ದಾಗಿ ದೂರುಗಾರ ತಿಳಿಸಿದ್ದಾನೆ. ಆನಂತರ ಯುವತಿಯ ನೇತೃತ್ವದಲ್ಲಿ ರುವ ತಂಡ ದೂರುಗಾರರನ್ನು ಪಡನ್ನಕ್ಕಾಡ್‌ನ ಒಂದು ಮನೆಗೆ ತಲುಪಿಸಿದ್ದು, ಬಳಿಕ ಲುಬ್ನಾ ತನ್ನನ್ನು ಅತ್ಯಾಚಾರಗೈದಿರುವುದಾಗಿ ಮನೆಯವರು ಹಾಗೂ ನಾಗರಿಕರಲ್ಲಿ ತಿಳಿಸಿ ದೂರುಗಾರನಿಗೆ ಬೆದರಿಕೆಯೊಡ್ಡಿ ಹಣಕ್ಕಾಗಿ ಬೇಡಿಕೆ ಮುಂದಿರಿಸಿರು ವುದಾಗಿ ದೂರಲಾಗಿದೆ.