ವ್ಯಾಪಾರಿಯನ್ನು ಕೊಲೆಗೈದು ಕಳವು: ದಂಪತಿ ಸೆರೆ
ಕೊಚ್ಚಿ: ಗುಜರಿ ವ್ಯಾಪಾರಿಯನ್ನು ಕೊಲೆಗೈದು ಮನೆಯಿಂದ ಕಳವು ನಡೆಸಿದ ದಂಪತಿಯನ್ನು ಬಂಧಿಸಲಾಗಿದೆ. ಬಿಹಾರ ನಿವಾಸಿಗ ಳಾದ ಕೌಶಲ್ ಕುಮಾರ್ (25), ಪತ್ನಿ ಅಸ್ಮಿತಾ ಕುಮಾರಿ (24) ಎಂಬಿವರನ್ನು ತೃಕ್ಕಾಕರ ಪೊಲೀಸರು ಬಂಧಿಸಿದ್ದಾರೆ. ಕಾಕ ನಾಡ್‌ನಲ್ಲಿ ಗುಜರಿ ವ್ಯಾಪಾರಿಯಾದ ವಾಳಕ್ಕಾಲ ಒತ್ತುಪ್ಪಳ್ಳಿ ರೋಡ್ ಸೈರಾ ಮಂಜಿಲ್‌ನ ಎಂ.ಎ. ಸಲೀಂ (69) ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಇವರು ಆರೋಪಿಗಳಾಗಿದ್ದಾರೆ. ಎರಡು ವಾರಗಳ ಹಿಂದೆ ಈ ಕೊಲೆ ಪ್ರಕರಣ ನಡೆದಿತ್ತು. ಅಸ್ಮಿತಾ ಸಲೀಂರ ಮನೆಕೆಲಸದಾಳಾಗಿದ್ದಳು.