ವ್ಯಾಪಾರಿ ಕುಸಿದು ಬಿದ್ದು ಮೃತ್ಯು
ಕಾಸರಗೋಡು: ಕಾಸರಗೋ ಡಿನ ಯುವ ವ್ಯಾಪಾರಿ ಕುಸಿದು ಬದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ನಾಯಕ್ಸ್ ರಸ್ತೆ ಬಳಿಯ ಬ್ರಾಂಡ್ ಮೆನ್ಸ್ ಸಂಸ್ಥೆಯ ಮಾಲಕ ಮೊಗ್ರಾಲ್ ಕೆ.ಎಂ. ಹೌಸಿನ ನಿವಾಸಿ ಮಹಮ್ಮೂದ್ (೪೧) ಸಾವನ್ನಪ್ಪಿದ ವ್ಯಾಪಾರಿ. ಇವರು ನಿನ್ನೆ ಸಂಜೆ ತಮ್ಮ ಅಂಗಡಿಯಲ್ಲಿ ದಿಢೀರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಮೊಗ್ರಾಲ್ ಯುನಾನಿ ಆಸ್ಪತ್ರೆ ಬಳಿಯ ದಿ| ಸೈನುದ್ದೀನ್- ಆಸ್ಯಮ್ಮ ದಂಪತಿ ಪುತ್ರನಾಗಿರುವ ಮುಹಮ್ಮೂದ್, ದೀನಾರ್ ಯುವಜನ ಸಂಘದ ಸಕ್ರಿಯ ಕಾರ್ಯಕರ್ತರೂ ಆಗಿದ್ದರು.
ಮೃತರು ಪತ್ನಿ ರಮ್ಲಾ (ಮಂ ಜೇಶ್ವರ), ಮಕ್ಕಳಾದ ಜಿಷಾನ್, ವಾಝಿ, ಫಾತಿಮ, ಸಹೋದರ ಸಹೋದರಿಯರಾದ ಅಬ್ಬಾಸ್, ರಶೀದ, ಅಬ್ದುಲ್ಲ, ಸಿದ್ದೀಕ್, ಖಾಲೀದ್, ಔಫ್, ಉಮ್ಮಾಲಿಮ್ಮ, ಸಂಶೀನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.