ವ್ಯಾಪಾರ ಭವನ ಸೊಸೈಟಿಯ ಲಾಕರನ್ನೇ ಕಳವುಗೈದ ಕಳ್ಳರು

ಕಾಸರಗೋಡು: ಕಾಸರಗೋಡು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಳ್ಳರ ಹಾವಳಿ ಯಾವುದೇ ರೀತಿಯ ನಿಯಂತ್ರಣಗಳಿಲ್ಲದೆ  ಎಗ್ಗಿಲ್ಲದೆ ಸಾಗು ತ್ತಿದೆ. ನಗರದ ಹೃದಯ ಭಾಗದಲ್ಲಿರುವ ಕಾಸರಗೋಡು  ವ್ಯಾಪಾರ ಭವನದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ವ್ಯಾಪಾರಿ ವ್ಯವಸಾಯಿ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ ಕಳ್ಳರು ೧,೬೦,೦೦೦ ರೂ. ನಗದು ಅಪಹರಿಸಿದ್ದಾರೆ.

 ನಗರದ ಎ.ಟಿ. ರಸ್ತೆಯ ಕಾಸರ ಗೋಡು ಬ್ಲೋಕ್ ಪಂಚಾಯತ್ ಕಚೇ ರಿಯ ಎದುರುಗಡೆ ವ್ಯಾಪಾರ ಭವನ ನೆಲೆಗೊಂಡಿದೆ. ಆ ಕಟ್ಟಡದಲ್ಲಿ   ಸೊಸೈಟಿ ಕಾರ್ಯವೆಸಗುತ್ತಿದೆ. ಅದರ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನ ಬೀಗ ಮುರಿದಿದ್ದಾರೆ. ಮಾತ್ರ ವಲ್ಲದೆ ನಗದು ಭದ್ರವಾಗಿ ಇರಿಸಲಾಗು ತ್ತಿರುವ ಕ್ಯಾಶ್ ಬೋಕ್ಸ್ (ಲಾಕರ್)ನ್ನೇ ಕಳಚಿ ತೆಗೆದು ಅದನ್ನು ಹೊರಕ್ಕೆ ಸಾಗಿಸಿ ಅದರೊಳಗಿದ್ದ ೧.೬೦ ಲಕ್ಷ ರೂಪಾಯಿ ಕಳವುಗೈದಿದ್ದಾರೆ. ಮೊನ್ನೆ ರಾತ್ರಿ ಈ ಕಳವು ನಡೆದಿದೆ.  ಈ ಸೊಸೈಟಿಯಲ್ಲಿ  ಹೊರಗೆ ಕಾವಲುಗಾರನಿದ್ದರೂ ಒಳಗೆ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿರಲಿಲ್ಲ.

ಸೊಸೈಟಿ ಸಿಬ್ಬಂದಿಗಳು ನಿನ್ನೆ ಬೆಳಿಗ್ಗೆ ಕಚೇರಿಗೆ ಬಂದಾಗಲೇ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಸ್ತುತ ಸೊಸೈಟಿ ಕಾರ್ಯದರ್ಶಿ ಅನಿತ.ಕೆ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ. ಬೆರಳಚ್ಚು ತಜ್ಞರು ಆಗಮಿಸಿ ಸೊಸೈಟಿಯಿಂದ ಹಲವು ಬೆರಳಚ್ಚು ಗಳನ್ನು ದಾಖಲಿಸಿಕೊಂಡಿದ್ದಾರೆ. ತನಿಖಗೆ ಶ್ವಾನದಳವನ್ನು ಬಳಸಲಾಗಿದೆ. ಆ ಪರಿಸರದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಕಳ್ಳರು ಈ ಸೊಸೈಟಿ ಕಟ್ಟಡದ ಹಿಂದಿನ ಭಾಗದಿಂದ ಬಂದು ಒಳನುಗ್ಗಿದ್ದರೆನ್ನಲಾಗಿದೆ. ಸೊಸೈಟಿಯ ಹಿಂದಿನ ಭಾಗದ ಪೊದೆಗಳನ್ನು ಕಡಿದು ಹಾಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳ್ಳರು ಕದ್ದು ಸಾಗಿಸಿದ ಕ್ಯಾಶ್ ಲಾಕರ್‌ಗಾಗಿ ಪೊಲೀಸರು ಇನ್ನೊಂದೆಡೆ ಶೋಧ ಆರಂಭಿಸಿ ದ್ದಾರೆ. ಕಳ್ಳರು ಲಾಕರನ್ನು ಒಡೆದು ಅದರೊಳಗಿದ್ದ ಹಣ ತೆಗೆದು, ಅದನ್ನು ಎಲ್ಲಿಯಾದರೂ ಉಪೇ ಕ್ಷಿಸಿರಬಹುದೆಂದು ಪೊಲೀಸರು ಹೇಳುತ್ತಿದ್ದಾರೆ.

ಇದೇ ರೀತಿ ಕೆಲವು ದಿನಗಳ ಹಿಂದೆಯಷ್ಟೇ ಕಳ್ಳರು ಕಾಸರಗೋಡು ನಗರಮಧ್ಯದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ನುಗ್ಗಿ ಅಲ್ಲಿನ ಶ್ರೀ ಶಾಸ್ತಾ ದೇವರ ಗುಡಿಬಳಿ ಇರಿಸಲಾಗಿದ್ದ ಹಣ ಒಳಗೊಂಡ ಕಾಣಿಕೆ ಡಬ್ಬಿಯನ್ನು ಅಪಹರಿಸಿ ದ್ದರು. ಆ ಡಬ್ಬಿ ಬಳಿಕ ಕಾಸರಗೋಡು ರೈಲು ನಿಲ್ದಾಣ ರಸ್ತೆ ಬಳಿ ಒಡೆದು ಉಪೇಕ್ಷಿಸಿದ ಸ್ಥಿತಿ ಯಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಇದರ ಹೊರ ತಾಗಿ ಎರಡು ದಿನಗಳ ಹಿಂದೆ  ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಕೆ.ಪಿ.ಆರ್. ರಾವ್ ರಸ್ತೆ ಸಮೀಪ ಕಾರ್ಯ ವೆಸಗುತ್ತಿರುವ  ನಗರಸಭೆಯ ಕುಟುಂಬಶ್ರೀ  ತರಕಾರಿ ಸ್ಟಾಲ್‌ನ ಬೀಗ ಮುರಿದು ಅದರೊಳಗಿದ್ದ ೫೦೦೦ ರೂ. ನಗದು ಅಪಹರಿಸಿದ್ದರು. ಮಾತ್ರವಲ್ಲ ಅಲ್ಲೇ ಪಕ್ಕದ ಲಾಟರಿ ಸ್ಟಾಲ್‌ನ ಬೀಗವನ್ನು ಕಳ್ಳರು ಒಡೆದು ಹಾಕಿದ್ದರು.  ಹಾಗೆಯೇ ನಗರದ ನೆಲ್ಲಿಕುಂಜೆ ಜಂಕ್ಷನ್ ಮತ್ತು ಬೀಚ್ ರಸ್ತೆ ಬಳಿಯಿರುವ ಎರಡು ಮಸೀದಿಗಳಲ್ಲಿ

ಎರಡು ದಿನಗಳ ಹಿಂದೆ ಕಳವು ಯತ್ನ ನಡೆದಿತ್ತು. ಇದು ಮಾತ್ರವಲ್ಲ ಉಳಿಯತ್ತಡ್ಕ ಮಸೀದಿಯ ಹಣ ಒಳಗೊಂಡಿದ್ದ ಕಾಣಿಕೆ ಡಬ್ಬಿಯನ್ನು ದಿನಗಳ ಹಿಂದೆ ಕಳ್ಳರು ಕದ್ದು ಸಾಗಿಸಿದ್ದರು. ಅಲ್ಲೇ ಪಕ್ಕದ ತರಕಾರಿ ಅಂಗಡಿಯೊಂದರಿಂದ ೭೦೦೦ ರೂ. ನಗದನ್ನು ಕಳವುಗೈದಿದ್ದರು. ಅದೇ ದಿನದಲ್ಲಿ ಮಧೂರು ಗ್ರಾಮ ಪಂಚಾಯತ್ ಕಚೇರಿ ಬಳಿಯ ತರಕಾರಿ ಅಂಗಡಿಯೊಂದರಿಂದಲೂ ಕಳ್ಳರು ಹಣ ಕದ್ದಿದ್ದರು.  ಕಳ್ಳರ ಕಾಟ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದು ಕಾಸರಗೋಡು ನಿವಾಸಿಗಳಲ್ಲಿ ಆತಂಕ ಸೃಷ್ಟಿಸುವಂತೆ ಮಾಡತೊಡಗಿದೆ.

Leave a Reply

Your email address will not be published. Required fields are marked *

You cannot copy content of this page