ಶಬರಿಮಲೆಗೆ 440 ಕೋಟಿ ರೂ. ಆದಾಯ
ಶಬರಿಮಲೆ: ಶಬರಿಮಲೆ ತೀರ್ಥಾಟನಾ ಋತು ಸುಗಮವಾಗಿ ಸಂಪನ್ನ ಗೊಂಡಿದೆ. ಈ ಅವಧಿಯಲ್ಲಿ ಶಬರಿಮಲೆಗೆ ಒಟ್ಟು 440 ಕೋಟಿ ರೂ.ಗಳ ಆದಾಯ ಉಂಟಾಗಿದೆ. ಕಳೆದ ತೀರ್ಥಾಟನಾ ಋತುವಿ ನೊಂದಿಗೆ ಹೋಲಿಸಿದಲ್ಲಿ ಈಬಾರಿ 80 ಕೋಟಿ ರೂ.ಗಳ ಅಧಿಕ ಆದಾಯ ಉಂಟಾಗಿದೆ.
ಮಾತ್ರವಲ್ಲ ಈಬಾರಿ ಶಬರಿಮಲೆ ತೀರ್ಥಾಟನೆ ನಡೆಸಿದವರ ಸಂಖ್ಯೆಯಲ್ಲಿ ಆರು ಲಕ್ಷದ ತನಕ ಏರಿಕೆ ಉಂಟಾಗಿದೆಯೆAದು ರಾಜ್ಯ ಮುಜರಾಯಿ ಖಾತೆ ಸಚಿವ ವಿ.ಎಸ್. ವಾಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಟ್ಟು ಆದಾಯದ ಪೈಕಿ 192 ಕೋಟಿ ರೂ.ಗಳ ಆದಾಯ ಅರವಣ ಪಾಯಸ ಪ್ರಸಾದ ವಿತರಣೆಯಿಂದ ಮಾತ್ರವಾಗಿ ಲಭಿಸಿದೆ. ಇದು ಕಳೆದ ವರ್ಷ 147 ಕೋಟಿ ರೂ. ಆಗಿತ್ತು. ಭಕ್ತರಿಂದ ಕಾಣಿಕೆ ಲಭಿಸಿದ ವತಿಯಿಂದ ಕಳೆದ ವರ್ಷ 109 ಕೋಟಿ ರೂ. ಲಭಿಸಿದರೆ ಅದು ಈ ಬಾರಿ 126 ಕೋಟಿ ರೂ.ಗೇರಿದೆ. ತೀರ್ಥಾಟನಾ ಋತುವಿನ ಒಂದು ದಿನದಲ್ಲಿ ಮಾತ್ರವಾಗಿ 1,08,800 ಭಕ್ತರು ಶಬರಿಮಲೆ ದರ್ಶನ ನಡೆಸಿದ್ದಾರೆ. ಸ್ಪೋಟ್ ಮತ್ತು ವರ್ಚ್ಯುವಲ್ ಕ್ಯೂ ಬುಕ್ಕಿಂಗ್ ಮೂಲಕ ಪ್ರತಿದಿನ ತಲಾ 80,000 ತೀರ್ಥಾಟಕರು ಆಗಮಿಸುವ ಸಾಧ್ಯತೆ ಇದೆಯೆಂದು ಲೆಕ್ಕ ಹಾಕಿದ್ದರೂ, ಅದನ್ನೂ ಮೀರಿ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ತೀರ್ಥಾಟಕರು ದರ್ಶನಕ್ಕೆ ಆಗಮಿಸಿದ್ದರು. ಈ ಬಾರಿ ಒಟ್ಟು 53,09,906 ತೀರ್ಥಾಟಕರು ಶಬರಿಮಲೆ ದರ್ಶನ ನಡೆಸಿದ್ದಾರೆ. ಕಳೆದ ವರ್ಷ ಇದು 46 ಲಕ್ಷ ಆಗಿತ್ತು. ಸ್ಪೋಟ್ ಬುಕ್ಕಿಂಗ್ ಮೂಲಕ 10,03,305 ಮಂದಿ ಆಗಮಿಸಿ ದ್ದಾರೆ. ತೀರ್ಥಾಟನಾ ಋತುವಿನಲ್ಲಿ ಒಟ್ಟಾರೆಯಾಗಿ 30 ಲಕ್ಷ ಮಂದಿ ಭಕ್ತರು ಅನ್ನಪ್ರಸಾದ ಸೇವಿಸಿದ್ದಾರೆ.