ಶಬರಿಮಲೆ ತೀರ್ಥಾಟನೆ: ಕೆಎಸ್‌ಆರ್‌ಟಿಸಿಗೆ ೩೮.೮೮ ಕೋಟಿ ರೂ. ಆದಾಯ

ಶಬರಿಮಲೆ: ಮಂಡಲ, ಮಕರಜ್ಯೋತಿ ಉತ್ಸವಕಾಲಾವಧಿಯಲ್ಲಿ ಶಬರಿಮಲೆಗೆ ಸಂಚಾರ ನಡೆಸಿದ ವತಿಯಿಂದ ಕೆಎಸ್‌ಆರ್‌ಟಿಸಿಗೆ ೩೮.೮೮ ಕೋಟಿ ರೂಪಾಯಿಗಳ ಆದಾಯ ಲಭಿಸಿದೆ. ಕೆಎಸ್‌ಆರ್‌ಟಿಸಿ ಪಂಪಾ-ನಿಲಯ್ಕಲ್ ರೂಟ್‌ನಲ್ಲಿ ೧,೩೭,೦೦೦ ಚೈನ್ ಸರ್ವೀಸ್, ೩೪,೦೦೦ ದೀರ್ಘದೂರ ಸಂಚಾರ ನಡೆಸಿದೆ. ಒಟ್ಟು ೬೪.೨೫ ಲಕ್ಷ ಮಂದಿ ಪ್ರಯಾಣಿಸಿದ್ದಾರೆಂದು ಲೆಕ್ಕಹಾಕಲಾಗಿದೆ.

Leave a Reply

Your email address will not be published. Required fields are marked *

You cannot copy content of this page