ಶಬರಿಮಲೆ ತೀರ್ಥಾಟನೆ:  ಭಕ್ತರಿಗೆ ದರ್ಶನ ಇಂದು ಮಾತ್ರ

ಶಬರಿಮಲೆ: ಮಕರಜ್ಯೋತಿ ತೀರ್ಥಾಟನೆ ಪೂರ್ಣಗೊಂಡು ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರ ಬಾಗಿಲು ನಾಳೆ ಬೆಳಿಗ್ಗೆ ೬ ಗಂಟೆಗೆ ಮುಚ್ಚಲಾಗುವುದು. ಇಂದು ರಾತ್ರಿ  ೧೦ ಗಂಟೆವರೆಗೆ ಮಾತ್ರವೇ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಸೌಕರ್ಯವಿರುವುದು. ಇಂದು ಅತ್ತಾಳಪೂಜೆ ಬಳಿಕ ಹರಿವರಾಸನಂ ಹಾಡಿ ಬಾಗಿಲು ಮುಚ್ಚಿದ ಕೂಡಲೇ ಮಾಳಿಗಪುರಂ ಕ್ಷೇತ್ರದಲ್ಲಿ ಗುರುದಿಕ್ರಿಯೆ ನಡೆಯಲಿದೆ. ನಾಳೆ ಮುಂಜಾನೆ ೫ ಗಂಟೆಗೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ೫.೩೦ಕ್ಕೆ ತಿರುವಾಭರಣವನ್ನು ಮರಳಿ ಕೊಂಡೊಯ್ಯಲಾಗುವುದು.

Leave a Reply

Your email address will not be published. Required fields are marked *

You cannot copy content of this page