ಶಬರಿಮಲೆ: ಮಕರಜ್ಯೋತಿ ದರ್ಶನ ಪಡೆದು ಭಾವಪರವಶರಾದ ಅಯ್ಯಪ್ಪ ಭಕ್ತರು

ಶಬರಿಮಲೆ: ಮಕರ ಸಂಕ್ರಾಂತಿ ದಿನದಂದು ಪ್ರತೀ ವರ್ಷವೆಂಬಂತೆ ಈ ವರ್ಷವೂ ನಿನ್ನೆ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನವಾಯಿತು. ಜ್ಯೋತಿಯನ್ನು ಕಂಡ ಅಯ್ಯಪ್ಪ ಭಕ್ತ ಗಣವು ಭಾವಪರವಶರಾದರು. ಶಬರಿ ಮಲೆ ಬೆಟ್ಟದಲ್ಲಿ ಮಕರ ಸಂಕ್ರಾಂತಿ ಯಂದು ಪ್ರತೀ ವರ್ಷ ನಡೆಯುವ ವಿಶೇಷ ಪೂಜೆಗೆ ಶಬರಿಮಲೆ ವಿಳಕ್ಕು ಎನ್ನುವ ಹೆಸರಲ್ಲಿ ಕರೆಯಲಾಗುತ್ತಿದೆ. ನಿನ್ನೆ ಸಂಜೆ ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ ನಡೆಯುತ್ತಿರು ವಂತೆಯೇ ಪೊನ್ನಂಬಲ ಮೇಡ್ ಬೆಟ್ಟ ದಲ್ಲಿ ೬.೪೫ರಿಂದ ೬.೭೪ ಗಂಟೆ ಒಳಗೆ ಮೂರು ಬಾರಿ ಮಕರ ಜ್ಯೋತಿ ದರ್ಶ ನವಾಯಿತು. ಆಗ ಅಯ್ಯಪ್ಪ ಭಕ್ತರಿಂದ ಸ್ವಾಮಿ ಯೇ ಶರಣಂಅಯ್ಯಪ್ಪ ಎಂಬ ಅಯ್ಯಪ್ಪನ ನಾಮಜಪ ಮುಗಿಲುಮುಟ್ಟಿತು.

ಮಕರಸಂಕ್ರಮಣ ಪೂಜೆ ಮತ್ತು ಮಕರ ಜ್ಯೋತಿ ದರ್ಶನಕ್ಕಾಗಿ ನಿನ್ನೆ ದೇಶವಿದೇಶಗಳಿಂದಾಗಿ ಸಹಸ್ರಾರು ತೀರ್ಥಾಟಕರು ಶಬರಿಮಲೆಗೆ ಹರಿದು ಬಂದು ಅವರೆಲ್ಲಾ ವಿಶೇಷ ಸಂಕ್ರಮಣ ಪೂಜೆ ಮತ್ತು ಮಕರಜ್ಯೋತಿ ದರ್ಶನ ನಡೆಸಿ ಪುನೀತರಾದರು. ರಾಜ್ಯ ಮುಜುರಾಯಿ ಖಾತೆ ಸಚಿವ ಕೆ. ರಾಧಾಕೃಷ್ಣನ್, ಮುಜರಾಯಿ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಸೇರಿದಂತೆ ಹಲವು ಗಣ್ಯರ ಈ ವೇಳೆ ಶಬರಿನಾಥನ ಸನ್ನಿಧಾನದಲ್ಲಿ ಹಾಜರಿದ್ದರು.

ಭಕ್ತರ ಭಾರೀ ನಿಬಿಡತೆಯನ್ನು ಪರಿಗಣಿಸಿ ಶಬರಿಮಲೆ ಮತ್ತು ಪರಿಸರ ಪ್ರದೇಶಗಳಲ್ಲಿ ಬಿಗು ಪೊಲೀಸ್ ಭದ್ರತೆಯನ್ನೂ ಏರ್ಪಡಿಸಲಾಗಿತ್ತು. ಜನವರಿ ೨೦ರ ತನಕ ಭಕ್ತರಿಗೆ ಶಬರಿಮಲೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page