ಶಬರಿಮಲೆ ಮಾಳಿಗಪುರದಲ್ಲಿ ತೆಂಗಿನಕಾಯಿ ಒಡೆಯುವಂತಿಲ್ಲ- ಹೈಕೋರ್ಟ್
ಕೊಚ್ಚಿ: ಶಬರಿಮಲೆಯ ಮಾಳಿಗ ಪುರಂ ಕ್ಷೇತ್ರದ ಸುತ್ತುಮುತ್ತಲು ತೆಂಗಿನ ಕಾಯಿ ಒಡೆಯುವಿಕೆ ಹಾಗೂ ಅರಶಿನ ಪುಡಿ ಸಿಂಪಡಿಸುವಿಕೆ ಶಬರಿಮಲೆ ಕ್ಷೇತ್ರದ ಆಚಾರದಲ್ಲಿ ಒಳಗೊಂಡಿಲ್ಲವೆಂದು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ಮಾಳಿಗಪುರಂ ಕ್ಷೇತ್ರದ ಸುತ್ತಮುತ್ತಲು ತೆಂಗಿನಕಾಯಿ ಒಡೆಯುವಿಕೆ ಹಾಗೂ ಹರಸಿನಪುಡಿ ಸಿಂಪಡಿಸುವಿಕೆ ಶಬರಿಮಲೆಯ ಆಚಾರ ಕ್ರಮವಲ್ಲವೆಂದು ಶಬರಿಮಲೆ ಕ್ಷೇತ್ರದ ತಂತ್ರಿಗಳು ಕೂಡಾ ಸ್ಪಷ್ಟಪ ಡಿಸಿದ್ದಾರೆ. ಮಾತ್ರವಲ್ಲ ಮಾಳಿಗಪುರ ಪರಿಸರದಲ್ಲಿ ಕೆಲವು ಭಕ್ತರು ತಾವು ಧರಿಸಿದ ಉಡುಪುಗಳನ್ನು ಅಲ್ಲೇ ಕಳಚಿ ಉಪೇಕ್ಷಿಸಿ ಹೋಗು ವುದೂ ಆಚಾರ ಕ್ರಮವಲ್ಲ. ಆದ್ದರಿಂದ ಈ ವಿಷಯ ವನ್ನು ಧ್ವನಿವರ್ಧಕಗಳ ಮೂಲಕ ತೀ ರ್ಥಾಟಕರಿಗೆ ಸದಾ ತಿಳಿಸಬೇ ಕೆಂದು ಹೈಕೋರ್ಟ್ ನಿರ್ದೇಶ ನೀಡಿದೆ.