ಶಬರಿಮಲೆ ಸನ್ನಿಧಾನದ ಮೇಲ್ಸೇತುವೆಯಿಂದ ಕೆಳಕ್ಕೆ ಧುಮುಕಿದ ಅಯ್ಯಪ್ಪ ಭಕ್ತ ಸಾವು
ಶಬರಿಮಲೆ: ಶಬರಿಮಲೆ ಸನ್ನಿಧಾನದ ಮೇಲ್ಸೇತುವೆಯಿಂದ ಕೆಳಕ್ಕೆ ಧುಮುಕಿದ ಅಯ್ಯಪ್ಪ ವ್ರತ ಧಾರಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಕರ್ನಾಟಕ ರಾಮ್ನಗರ ನಿವಾಸಿ ಕುಮಾರಸ್ವಾಮಿ (40) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ ಮಾಳಿಗಪುರದತ್ತ ಸಾಗುವ ಮೇಲ್ಸೇತುವೆ (ಫ್ಲೈ ಓವರ್)ನಿಂದ ಕೆಳಕ್ಕೆ ಹಾಕಿದ್ದು, ಕೈ ಮತ್ತು ಕಾಲಿಗೆ ಗಾಯ ಉಂಟಾಗಿತ್ತು. ತಕ್ಷಣ ಅವರನ್ನು ಅಲ್ಲಿಂದ ಸನ್ನಿಧಾನದಲ್ಲಿರುವ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಉನ್ನತ ಮಟ್ಟದ ಚಿಕಿತ್ಸೆ ಗಾಗಿ ಆಂಬುಲೆನ್ಸ್ನಲ್ಲಿ ಕೋಟ್ಟಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಹೃದಯಾಘಾತವೇ ಸಾವಿಗೆ ಕಾರಣವಾಗಿದೆಯೆಂದು ಸಂಶಯಿಸಲಾಗುತ್ತಿದೆ.