ಶಾಂತಿಪಳ್ಳದಲ್ಲಿ ಮನೆಯಿಂದ ಕಳವು: 13 ಬೆರಳಚ್ಚು ಪತ್ತೆ: ಶ್ವಾನದಳದಿಂದ ತನಿಖೆ; ಕೃಷ್ಣನಗರದಲ್ಲೂ ಮನೆಗೆ ನುಗ್ಗಿದ ಕಳ್ಳರು ಯುವಕನನ್ನು ದೂಡಿ ಹಾಕಿ ಪರಾರಿ

ಕುಂಬಳೆ: ಶಾಂತಿಪಳ್ಳ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ಸುಬೈರ್ ಎಂಬವರ ಮನೆಯಿಂದ ಚಿನ್ನಾಭರಣ ಹಾಗೂ ಯು.ಎ.ಇಯ ದಿರ್ಹಾಂ ಕಳವಿಗೀಡಾದ ಪ್ರಕರಣದಲ್ಲಿ ಆರೋಪಿಗಳಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ನಿನ್ನೆ ಈ ಮನೆಗೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ಮನೆ ಬಳಿಯಿಂದ ಹಿಂಬದಿ ಗೇಟ್ ಮೂಲಕ ಓಡಿ ಅಲ್ಪ ದೂರದ ಜನವಾಸವಿಲ್ಲದ ಸ್ಥಳದಲ್ಲಿ ನಿಂತಿದೆ. 

ಮನೆಯೊಳಗಿಂದ ೧೩ ಬೆರಳಚ್ಚುಗಳು ಪತ್ತೆಯಾಗಿದೆ. ಅವುಗಳನ್ನು ಪರಿಶೀಲಿಸಿ ಕಳ್ಳರ ಸುಳಿವು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿ. ಮೊನ್ನೆ ರಾತ್ರಿ ಈ ಮನೆಯಿಂದ ೨೩ ಪವನ್ ಚಿನ್ನಾಭರಣ ಹಾಗೂ ೪೦೦ ದಿರ್ಹಾಂ ಕಳವಿಗೀಡಾಗಿತ್ತು. ಕುಟುಂಬ ಉಳ್ವಾರ್‌ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಎರಡಂತಸ್ತಿನ ಮನೆಗೆ ಕಳ್ಳರು ನುಗ್ಗಿ ಕಳವು ನಡೆಸಿದ್ದರು.  ಈ ಮನೆ ಸಮೀಪದ ರಸ್ತೆಯಲ್ಲಿ ನಿನ್ನೆ ಮುಂಜಾನೆ ೧.೪೫ರ ವೇಳೆ ಕರ್ನಾಟಕ ನೋಂದಾಯಿತ ಕಾರೊಂದು ನಿಂತಿತ್ತೆಂದು ಹೇಳಲಾಗುತ್ತಿದೆ. ಈ ಬಗ್ಗೆ ಎಸ್.ಐ. ಟಿ.ಎಂ. ವಿಪಿನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಇದೇ ವೇಳೆ ಶಾಂತಿಪಳ್ಳದಿಂದ ಅಲ್ಪದೂರವೇ ಇರುವ ಕೃಷ್ಣ ನಗರದ ಮನೆಯೊಂದಕ್ಕೂ ಕಳ್ಳರು ನುಗ್ಗಿ ಕಳವಿಗೆತ್ನಿಸಿರುವುದಾಗಿ ದೂರಲಾಗಿದೆ. ಕೃಷ್ಣನಗರ ನಿವಾಸಿಯೂ ಕುಂಬಳೆ ಪೇಟೆಯ ಬದಿಯಡ್ಕ ರಸ್ತೆಯಲ್ಲಿ ಗೂಡಂಗಡಿ ನಡೆಸುವ ವಸಂತ ಕುಮಾರ್‌ರ ಕಾಂಕ್ರೀಟ್ ಮನೆಗೆ ಕಳ್ಳರು ನುಗ್ಗಿದ್ದಾರೆ. ನಿನ್ನೆ ಮುಂಜಾನೆ ೧ ಗಂಟೆ ವೇಳೆ ಇಲ್ಲಿಗೆ ಕಳ್ಳರು ತಲುಪಿದ್ದರು. ಈ ವೇಳೆ ವಸಂತ ಕುಮಾರ್ ಮನೆಯಲ್ಲಿರಲಿಲ್ಲ. ಇವರ ಪತ್ನಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ನೌಕರೆಯಾದ ಶಾಲಿನಿ ಆಸ್ಪತ್ರೆಗೆ ತೆರಳಿದ್ದರು. ಮನೆಯಲ್ಲಿ ವಸಂತ ಕುಮಾರ್‌ರ ಸಹೋದರ ರತೀಶ್ ಕುಮಾರ್ ಹಾಗೂ ಮಕ್ಕಳಿದ್ದರು.  ನಿನ್ನೆ ಮುಂ ಜಾನೆ ೧ ಗಂಟೆ  ವೇಳೆ ಟೆರೇಸ್‌ನ ಮೇಲೇರಿ ಅಲ್ಲಿಂದ ಕೆಳಕ್ಕಿಳಿದ ಕಳ್ಳರು ಕೊಠಡಿಗೆ ನುಗ್ಗಿದ್ದಾರೆ.  ಕೊಠಡಿಯೊ ಳಗೆ ಸದ್ದು ಕೇಳಿ ರತೀಶ್ ಕುಮಾರ್ ಅಲ್ಲಿಗೆ ತೆರಳಿದಾಗ ಓರ್ವ ಕಳ್ಳ ಅವರನ್ನು ದೂಡಿ ಹಾಕಿ ಪರಾರಿಯಾಗಿದ್ದಾನೆ. ಈ ವೇಳೆ ಇನ್ನೋರ್ವ ಕಳ್ಳ ಹೊರಗೆ ನಿಂತಿದ್ದನೆಂದು ಹೇಳಲಾಗುತ್ತಿದೆ.   ಶಾಂತಿಪಳ್ಳದ ಸುಬೈರ್‌ರ ಮನೆಯಿಂದ ಕಳವು ನಡೆಸಿದ ತಂಡವೇ ಕೃಷ್ಣನಗರದ ಮನೆಗೂ ತಲುಪಿದೆಯೇ ಎಂದು ಸಂಶಯಿಸಲಾಗಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

Leave a Reply

Your email address will not be published. Required fields are marked *

You cannot copy content of this page