ಶಾಲಾ ಪರಿಸರ ಮಾದಕವಸ್ತು ಮಾರಾಟ: ಪೈವಳಿಕೆಯಲ್ಲಿ ಓರ್ವ ಸೆರೆ
ಉಪ್ಪಳ: ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲೆಂದು ಮಾದಕವಸ್ತುಗಳೊಂ ದಿಗೆ ನಿಂತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಜೋಲಾಹರ ನಿವಾಸಿ ದೀಪಕ್ ಸೋಂಕಾರ್ (39) ಎಂಬಾತನನ್ನು ಮಂಜೇಶ್ವರ ಎಸ್‌ಐ ಮನುಕೃಷ್ಣನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪ ದಿಂದ ಈತನನ್ನು ಬಂಧಿಸಲಾಗಿದೆ. ಈತನ ಕೈಯಿಂದ 375 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಶಾಲಾ ಪರಿಸರವನ್ನು ಕೇಂದ್ರೀಕರಿಸಿ ಮಾದಕವಸ್ತುಗಳ ಮಾರಾಟ ವ್ಯಾಪಕಗೊಂಡ ಬಗ್ಗೆ ಲಭಿಸಿದ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.