ಶಾಲಾ ಪ್ರವೇಶೋತ್ಸವಕ್ಕೆ ಸಿದ್ಧತೆ ಆರಂಭ: ಕುಂಬಳೆಯಲ್ಲಿ ಅಧ್ಯಾಪಕರು, ಪಿಟಿಎ ಅಪಾಯಕಾರಿ ಕಟ್ಟಡಗಳಿಗೆ ಕಾವಲು ನಿಲ್ಲಬೇಕಾದ ಸ್ಥಿತಿ

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪದಲ್ಲಿರುವ  ಮುರಿದು ಬೀಳಲು ಸಿದ್ಧವಾದ ಎರಡು ಕಟ್ಟಡಗಳು ವಿದ್ಯಾರ್ಥಿಗಳಿಗೆ  ಅಪಾಯ ಭೀತಿ ಹೆಚ್ಚುತ್ತಿದೆ. ಈ ಕಟ್ಟಡಗಳನ್ನು ಮುರಿದು ತೆಗೆಯಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಲೆ  ಪಿಟಿಎ ಹಾಗೂ ಅಧ್ಯಾಪಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದರೂ ಯಾವುದೇ ಕ್ರಮ ಉಂಟಾಗಿಲ್ಲ. ಆದ್ದರಿಂದ ಅಪಾಯ ಭೀತಿಯೊ ಡ್ಡುತ್ತಿರುವ  ಕಟ್ಟಡಗಳ ಸಮೀಪ ಈ ಶೈಕ್ಷಣಿಕ ವರ್ಷವೂ ಅಧ್ಯಾಪಕರು ಹಾಗೂ ಪಿಟಿಎ ಕಾವಲು ಕುಳಿತು ಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ಎರಡು ದಶಕಗಳಿಗಿಂತ ಹೆಚ್ಚು ಕಾಲದಿಂದ  ಉಪಯೋಗ ಶೂ ನ್ಯವಾದ ಪಿಡಬ್ಲ್ಯುಡಿ ರೆಸ್ಟ್ ಹೌಸ್ ಹಾಗೂ ಅದಕ್ಕೆ ಸಂಬಂಧಪಟ್ಟ ಕಟ್ಟಡ ವಿದ್ಯಾರ್ಥಿಗಳಿಗೆ ಬೆದರಿಕೆಯಾಗಿದೆ. ಶಾಲೆಗೆ ಬೇಗನೇ ತಲುಪುವ ಹಾಗೂ ಬೇಗ ಹೊರಡುವ ವಿದ್ಯಾರ್ಥಿಗಳು ಮೈದಾನ ಸಮೀಪವಿರುವ ಈ ಕಟ್ಟಡಗಳ  ಸಮೀಪದಲ್ಲೇ ತೆರಳುತ್ತಾರೆ. ಇದು ವಿದ್ಯಾರ್ಥಿಗಳ ರಕ್ಷಕರು, ಪಿಟಿಎ ಹಾಗೂ ಅಧ್ಯಾಪಕರಿಗೆ ಆತಂಕಕ್ಕೆ ಕಾರಣವಾಗುತ್ತಿದೆ.

ಈ ಎರಡು ಕಟ್ಟಡಗಳಿಗೆ ೫೦ಕ್ಕೂ ಹೆಚ್ಚು ವರ್ಷಗಳ ಹಳಮೆಯಿ ದೆಯೆಂದು  ಹೇಳಲಾಗುತ್ತಿದೆ. ವರ್ಷಗಳ ಹಿಂದೆ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ವಿಶ್ರಾಂತಿ ಪಡೆಯಲೆಂದು ಈ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಅನಂತರ ಅವುಗಳನ್ನು ಪಿಡಬ್ಲ್ಯುಡಿ ಉಪೇಕ್ಷಿಸಿದೆ. ಕಟ್ಟಡದ ಮೇಲ್ಛಾವಣಿಯ ಅರ್ಧಭಾಗ ಮುರಿದು ಬಿದ್ದಿದೆ. ಉಳಿದ ಭಾಗ ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿಯಲ್ಲಿದೆ.

ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ  ಯುಪಿ ಶಾಲೆಯಲ್ಲಾಗಿ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಾರೆ.  ಅವರೆಲ್ಲಾ ಈ ಕಟ್ಟಡಗಳ ಸಮೀಪದಲ್ಲಾಗಿ ನಡೆದುಹೋಗಬೇಕಾಗಿದೆ. ಅಲ್ಲದೆ ಬಿಡುವು ಸಮಯ ಈ ಪರಿಸರದಲ್ಲೇ ಆಟವಾಡುತ್ತಿದ್ದಾರೆ. ಆಟ ವೇಳೆ ಮಳೆಗೆ,  ಬಿಸಿಲಿದ್ದರೆ ಈ ಕಟ್ಟಡದೊಳಗೆ ನಿಲ್ಲುತ್ತಾರೆ.

ಕಣಿಪುರಶ್ರೀ ಗೋಪಾಲಕೃಷ್ಣ  ಕ್ಷೇತ್ರ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಲಕ್ಷಾಂತರ ಮಂದಿ ಭಾಗವಹಿಸಿದ್ದ ಈ  ಸಂದರ್ಭದಲ್ಲಿ ಈ ಕಟ್ಟಡಗಳ ಸಮೀಪ ಸ್ವಯಂಸೇವಕರಿಗೆ ಕಾವಲು ನಿಲ್ಲಬೇಕಾಗಿ ಬಂದಿತ್ತು. ಶಾಲಾ ಮೈದಾನದಲ್ಲಿ ವಿವಿಧ ಕಾರ್ಯಕ್ರಮ ಗಳನ್ನು  ನಡೆಸುವಾಗಲೂ ಇದೇ ಸ್ಥಿತಿ ಉಂಟಾಗುತ್ತಿದೆ.

ಶಾಲೆ ತೆರೆದ ಕಾರ್ಯಾರಂಭ ಗೊಳ್ಳುವ ಮುಂಚೆ ಈ ಅಪಾಯಕಾರಿ ಕಟ್ಟಡಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳ ಬೇಕೆಂದು ನಾಗರಿಕರು ಹಾಗೂ ಶಾಲಾ ಪಿಟಿಎ ಒತ್ತಾಯಿಸಿದೆ.

Leave a Reply

Your email address will not be published. Required fields are marked *

You cannot copy content of this page