ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ ಇಂದು

ಮಂಗಲ್ಪಾಡಿ: ಪ್ರತಾಪನಗರ ಶಿವಶಕ್ತಿ ಪ್ರೆಂಡ್ಸ್ ಕ್ಲಬ್ ಇದರ 32ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಇಂದು ಸಂಜೆ 6ಗಂಟೆಗೆ ನಡೆಯಲಿದೆ. ರಾತ್ರಿ 8ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಸುಬ್ರಾಯ ಹೊಳ್ಳ ತಿಂಬರ ಅಧ್ಯಕ್ಷತೆ ವಹಿಸುವರು. ಮೂಡಬಿದ್ರಿ ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ.ಮನು ಭಟ್ ಕೆದುಕೋಡಿ, ಮಂಜೇಶ್ವರ ಬೋಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ.ಎಲ್, ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಧಾ ಗಣೇಶ್, ಉದ್ಯಮಿ ವಿಕ್ರಮ್ ಪೈ ಕುಂಬಳೆ ಭಾಗವಹಿಸುವರು. ರ‍್ಯಾಂಕ್ ವಿಜೇತೆ ವೃದ್ದಿ ಶೆಟ್ಟಿ ತಿಂಬರ, ಪ್ರಶಸ್ತಿ ವಿಜೇತ ಕಂಬಳ ಓಟಗಾರ ರಕ್ಷಿತ್ ಶೆಟ್ಟಿ ಪರಪು ಮಂಗಲ್ಪಾಡಿ, ಮೈಕ್ರೋ ಆರ್ಟ್ ವೆಂಕಟೇಶ್ ಆಚಾರ್ಯ ಇಚ್ಲಂಗೋಡು ಈ ಸಾಧಕರನ್ನು ಸನ್ಮಾನಿಸಲಾಗುವುದು. ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ರಾತ್ರಿ 9ರಿಂದ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ “ಅಮ್ಮೆರ್” ತುಳು ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page