ಶೇಂದಿ ಅಂಗಡಿ ಕಾರ್ಮಿಕ ಕುಸಿದುಬಿದ್ದು ಮೃತ್ಯು
ಮಂಜೇಶ್ವರ: ಮಂಜೇಶ್ವರ ಡಾನ್ಬಾಸ್ಕೋ ಶಾಲಾ ಬಳಿಯ ನಿವಾಸಿ ದಿ ಬೌತೀಸ್ ಡಿ ಸೋಜಾ ರ ಪುತ್ರ ಹೆಂಡ್ರಿ ಡಿ ಸೋಜಾ [46] ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಚಿಗುರುಪಾದೆಯಲ್ಲಿ ಶೇಂದಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ಸಂಜೆ ಕೆಲಸದ ಮಧ್ಯೆ ಕುಸಿದು ಬಿದ್ದಿದ್ದು, ಕೂಡಲೇ ಉಪ್ಪಳ ಆಸ್ಪತ್ರೆಗೆ ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ತಾಯಿ ಎಲಿಝ ಫರಾವೋ, ಪತ್ನಿ ವಿನಿತ ವೇಗಸ್, ಪುತ್ರ ವಿನೀಶ್, ಇಬ್ಬರು ಸಹೋದರರು, ನಾಲ್ಕು ಮಂದಿ ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.