ಶೋಚನೀಯ ಸ್ಥಿತಿಯ ಪೆರ್ಮುದೆ- ಧರ್ಮತ್ತಡ್ಕ ಮೆಕ್ಕಡಾಂ ರಸ್ತೆಗೆ ದುರಸ್ತಿ ಭಾಗ್ಯವಿಲ್ಲ!
ಪೆರ್ಮುದೆ: ಪೆರ್ಮುದೆ -ಧರ್ಮತ್ತಡ್ಕ ಮೆಕ್ಕಡಾಂ ರಸ್ತೆ ಬಾಳಿಗೆ ಎಂಬಲ್ಲಿ ಹಾನಿಗೊಂಡು ಹಲವು ಕಾಲ ಕಳೆದರೂ ದುರಸ್ತಿಗೆ ಅಧಿಕಾರಿಗಳು ಮನ ಸಿಟ್ಟಿಲ್ಲವೆಂದು ಸ್ಥಳೀಯರು ಆರೋಪಿ ಸಿದ್ದಾರೆ. ಪಿ.ಬಿ. ಅಬ್ದುಲ್ ರಜಾಕ್ ಶಾಸಕರಾಗಿದ್ದಾಗ ದುರಸ್ತಿಗೊಳಿಸಿದ ಈ ರಸ್ತೆ ಈಗ ಶೋಚನೀಯ ಸ್ಥಿತಿಯಲ್ಲಿದ್ದು, ದ್ವಿಚಕ್ರ ವಾಹನಗಳು ಕೂಡಾ ಅಪ ಘಾತಕ್ಕೀಡಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಇತ್ತೀಚೆಗೆ ಸಂಭವಿಸಿದ ಅಪಘಾತವೊಂದರಲ್ಲಿ ಕುಂಜತ್ತೂರಿನ ಅಶ್ರಫ್, ಪತ್ನಿ ಗಾಯಗೊಂಡಿದ್ದು, ಮಗು ಅದೃಷ್ಟವಶಾತ್ ಗಾಯಗಳಿಲ್ಲದೆ ಪಾರಾಗಿತ್ತು. ಬಳಿಕ ಈ ರಸ್ತೆಯನ್ನು ದುರಸ್ತಿಗೊಳಿಸಲು ಬೇಕಾಗಿ ತಿಂಗಳುಗಳ ಕಾಲ ಮುಚ್ಚಲಾಗಿತ್ತು. ದುರಸ್ತಿಗೊಳಿಸಿದ ಬಳಿಕ ಇದೇ ಸ್ಥಳದಲ್ಲಿ ಆರು ತಿಂಗಳೊಳಗೆ ಹೊಂಡಗಳು ಪ್ರತ್ಯಕ್ಷಗೊಂ ಡಿದ್ದು, ದುರಸ್ತಿಯಲ್ಲಿ ಕಳಪೆ ಕಾಮಗಾರಿ ಕಾರಣವೆಂದು ದೂರಲಾಗಿದೆ.
ಕಾಸರಗೋಡಿನಿಂದ ಹಾಗೂ ಉಪ್ಪಳದಿಂದ, ಬಂದ್ಯೋಡು ಚೇವಾರು ಮೂಲಕ, ಕುಂಬಳೆಯಿಂದ ಸೀತಾಂ ಗೋಳಿ ಪುತ್ತಿಗೆ ಮೂಲಕ ಈಗಲೂ ಹಲವಾರು ಖಾಸಗಿ ವಾಹನಗಳು, ಬಸ್‌ಗಳು ದಿನಂಪ್ರತಿ ಸಂಚರಿಸುವ ರಸ್ತೆಯಾಗಿದೆ ಇದು. ಕನಿಯಾಲ ಮೂಲಕ ಪೆರ್ಲಕ್ಕೂ, ಉಕ್ಕಿನಡ್ಕ ಮೆಡಿಕಲ್ ಕಾಲೇಜಿಗೂ ಮೂರು ಖಾಸಗಿ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಹಲವಾರು ಸರಕು ಲಾರಿಗಳು ಕೂಡಾ ರಾತ್ರಿ ಹಗಲೆನ್ನದೆ ಈ ರಸ್ತೆಯಲ್ಲಿ ಸಂಚರಿಸುತ್ತಿವೆ.
ವಿನೋದ ಸಂಚಾರಕೇಂ ದ್ರವಾಗಿ ಘೋಷಿಸಿದ ಪೊಸಡಿ ಗುಂಪೆ ಈ ಪರಿಸರದಲ್ಲಿದ್ದು, ಇಲ್ಲಿಗೆ ತೆರಳುವವರು ಕೂಡಾ ಇದೇ ರಸ್ತೆಯನ್ನು ಆಶ್ರಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದುರಂತ ಸಂಭವಿಸುವ ಮೊದಲು ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.