ಶ್ರೀಕಾಂತ್ರಿಗೆ ಅಪರಿಚಿತನಿಂದ ಬೆದರಿಕೆ: ತನಿಖೆ ಆರಂಭ
ಕಾಸರಗೋಡು: ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್ರಿಗೆ ಅಪರಿಚಿತ ವ್ಯಕ್ತಿಯೋರ್ವರು ಬೆದರಿಕೆ ಒಡ್ಡಿದ್ದಾನೆ.
ತೃಕ್ಕನ್ನಾಡಿನಲ್ಲಿರುವ ಶ್ರೀಕಾಂತ್ ರ ಮನೆಗೆ ಅಕ್ರಮಿಯೋರ್ವ ನಿನ್ನೆ ಅಕ್ರಮವಾಗಿ ನುಗ್ಗಿ ಬಂದು ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ. ಆ ವೇಳೆ ಶ್ರೀಕಾಂತ್ ಅವರ ಪತ್ನಿ ಮನೆಯಲ್ಲಿರಲಿಲ್ಲ. ಮಕ್ಕಳು ಮಾತ್ರವೇ ಮನೆಯಲ್ಲಿದ್ದರು. ಅವರಲ್ಲೇ ಅಕ್ರಮಿ ಈ ಕೊಲೆ ಬೆದರಿಕೆ ಒಡ್ಡಿದ್ದಾನೆಂದು ದೂರಲಾಗಿದೆ. ಈ ಬಗ್ಗೆ ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.