ಶ್ರೀರಾಮ ಕ್ಷೇತ್ರ: ಆರು ವಿಶೇಷ ಅಂಚೆ ಚೀಟಿ ಬಿಡುಗಡೆ

ಹೊಸದಿಲ್ಲಿ: ಶ್ರೀ ರಾಮಜನ್ಮಭೂಮಿ ಸಮರ್ಪಣೆಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರು ವಿಶೇಷ ಅಂಚೆ ಚೀಟಿಗಳನ್ನು ಹಾಗೂ ಶ್ರೀ ರಾಮನಿಗೆ ಸಂಬಂಧಿಸಿದ ವಿಶೇಷ ಸ್ಟಾಂಪ್‌ಗಳು ಒಳಗೊಂಡ ಆಲ್ಬಂನ್ನು ಬಿಡುಗಡೆಗೊಳಿಸಿದರು.

ಈ ಅಂಚೆ ಚೀಟಿಗಳು ಕೇವಲ ಕಾಗದದ ತುಂಡುಗಳಲ್ಲ. ಬದಲಾಗಿ ಐತಿಹಾಸಿಕ ದಾಖಲೆಗಳ ಪುಟ್ಟ ಪುಸ್ತಕವಾಗಿದೆ. ಅವು ಮಾನವ ನಿರ್ಮಿತ ಹಾಗೂ ಐತಿಹಾಸಿಕ ಪ್ರಾಧಾನ್ಯತೆಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ನುಡಿದರು. ಭವಿಷ್ಯದ ತಲೆಮಾರಿಗೆ ಐತಿಹಾಸಿಕ ದಾಖಲೆಗಳ ಮೂಲಕ ಸಾಗಲಿರುವ ಮಾರ್ಗದರ್ಶಿಯೂ ಆಗಿದೆ. ಪ್ರತೀ ಸ್ಟಾಂಪ್‌ಗಳನ್ನು ಇತಿಹಾಸದ ಒಂದು ಭಾಗವಾಗಿ ಅದನ್ನು ಹಸ್ತಾಂತರಿಸುವುದಾಗಿ ಅವರು ತಿಳಿಸಿದರು. ಜಾತಿ, ಸಮಾಜ ಹಾಗೂ ಕಾಲಕ್ಕೆ ಹೊರತಾಗಿ ಶ್ರೀರಾಮ, ಸೀತಾ ದೇವಿ ಹಾಗೂ ರಾಮಾಯಣದ ದರ್ಶನಗಳನ್ನು ಈ ಅಂಚೆ ಚೀಟಿಗಳು ಸಾಬೀತುಪಡಿಸುತ್ತಿವೆಯೆಂದು ಪ್ರಧಾನಮಂತ್ರಿ ತಿಳಿಸಿದರು. ಸಂದಿಗ್ಧ ಸಂದರ್ಭದಲ್ಲಿ ಸ್ನೇಹ, ತ್ಯಾಗ, ಏಕತೆ, ಧೈರ್ಯ ಎಂಬಿವುಗಳನ್ನು ಒಗ್ಗೂಡಿಸುವುದು ರಾಮಾಯಣ ವಾಗಿದೆ. ಅದನ್ನು ಇಡೀ ಜಗತ್ತು ಅನುಸರಿಸುತ್ತಿದೆಯೆಂದೂ ಪ್ರಧಾನಮಂತ್ರಿ ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page