ಶ್ರೀ ಅಯ್ಯಪ್ಪ ಬಾಲಗೋಕುಲ ಉದ್ಘಾಟನೆ
ಮಂಜೇಶ್ವರ: ಹೊಸಂಗಡಿ ಪ್ರೇರಣದಲ್ಲಿ ಶ್ರೀ ಅಯ್ಯಪ್ಪ ಮಾತೃ ಸಮಿತಿಯ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಬಾಲಗೋಕುಲ ಹೊಸಂಗಡಿ ಸಮಿತಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆಗೊಂಡಿತು.
ಹೊಸAಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅರ್ಚಕ ತಿರುಮಲೇಶ್ ಆಚಾರ್ಯ ಮತ್ತು ಅಧ್ಯಕ್ಷ ಪದ್ಮನಾಭ ಕಡಪ್ಪುರ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಾಲಗೋಕುಲದ ಜಿಲ್ಲಾ ರಕ್ಷಾಧಿಕಾರಿ ಶಂಕರನಾರಾಯಣ ಭಟ್ ಮಣ್ಣಿಪಾಡಿ ಬೌದ್ಧಿಕ್ ನೀಡಿದರು. ನಂತರ ಜಿಲ್ಲಾಧ್ಯಕ್ಷ ನಾರಾಯಣ ಮಾಸ್ತರ್ ಪ್ರಥಮ ಬಾಲಗೋಕುಲ ತರಗತಿಯನ್ನು ನಡೆಸಿದರು. ದಿನಕರ ಹೊಸಂಗಡಿ ನಿರೂಪಿಸಿ, ಬಾಲಗೋಕುಲ ಅಧ್ಯಕೆÀ್ಷ ಅನುಪಮ ನವೀನ್ ರಾಜ್ ಸ್ವಾಗತಿಸಿದರು.